ಬ್ರಿಟನ್‌ನಲ್ಲಿ ‘ಏಕಾಂಗಿತನ ಸಚಿವೆ’ ನೇಮಕ !

Update: 2018-01-17 17:19 GMT

ಲಂಡನ್, ಜ. 17: ಬ್ರಿಟನ್‌ನಲ್ಲಿರುವ 90 ಲಕ್ಷಕ್ಕೂ ಅಧಿಕ ಯುವ ಮತ್ತು ಹಿರಿಯ ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳಲು ಪ್ರಧಾನಿ ತೆರೇಸಾ ಮೇ ಬುಧವಾರ ಸಚಿವೆಯೊಬ್ಬರನ್ನು ನೇಮಿಸಿದ್ದಾರೆ. ಈ ವ್ಯಕ್ತಿಗಳಲ್ಲಿ ಹೆಚ್ಚಿನವರು ಹಲವು ದಿನಗಳಿಂದ ಹಾಗೂ ವಾರಗಳ ಅವಧಿಯಲ್ಲಿ ಸಾಮಾಜಿಕ ಸಂವಹನವನ್ನು ಹೊಂದದವರಾಗಿದ್ದಾರೆ.

 ಇದು ಲೇಬರ್ ಪಕ್ಷದ ದಿವಂಗತ ಸಂಸದ ಜೋ ಕಾಕ್ಸ್ ಆರಂಭಿಸಿದ ಏಕಾಂಗಿತನ ಕುರಿತ ಯೋಜನೆಯ ಭಾಗವಾಗಿದೆ. ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಮುಂದುವರಿಯಬೇಕೆ ಎನ್ನುವುದನ್ನು ನಿರ್ಧರಿಸುವ ಜನಮತಗಣನೆಗೆ ಸಂಬಂಧಿಸಿದ ಉದ್ರಿಕ್ತ ಘಟನೆಯೊಂದರಲ್ಲಿ ಅವರು 2016 ಜೂನ್‌ನಲ್ಲಿ ಮೃತಪಟ್ಟಿದ್ದಾರೆ.

ಕ್ರೀಡಾ ಮತ್ತು ನಾಗರಿಕ ಸಮಾಜ ಖಾತೆಯ ಸಚಿವೆಯಾಗಿರುವ ಟ್ರೇಸಿ ಕ್ರೌಚ್‌ರಿಗೆ ಏಕಾಂಗಿತನ ಖಾತೆಯನ್ನು ವಹಿಸಲಾಗಿದೆ.

ಏಕಾಂಗಿತನಕ್ಕೆ ಸಂಬಂಧಿಸಿದ ನೀತಿ ವಿಷಯಗಳಲ್ಲಿ ಈ ಸಚಿವಾಲಯವು ಸರಕಾರದ ವಿವಿಧ ಇಲಾಖೆಗಳ ನಡುವೆ ವ್ಯವಹರಿಸುವುದು ಈ ಸಚಿವೆಯ ಕೆಲಸವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News