×
Ad

ನಾಝಿ ಸಾವಿನ ಶಿಬಿರದ ಸಹಾಯಕನ ದಯಾ ಅರ್ಜಿ ರದ್ದು

Update: 2018-01-17 23:06 IST

ಬರ್ಲಿನ್, ಜ. 17: ನಾಝಿ ಆಕ್ರಮಿತ ಪೋಲ್ಯಾಂಡ್‌ನ ಆಶ್ವಿಝ್ ಸಾವಿನ ಶಿಬಿರದಲ್ಲಿ ನಡೆದ 3 ಲಕ್ಷಕ್ಕೂ ಅಧಿಕ ಜನರ ಹತ್ಯೆಗೆ ಸಂಬಂಧಿಸಿ ದೋಷಿಯಾಗಿರುವ 96 ವರ್ಷದ ಜರ್ಮನ್ ನಿವಾಸಿ ಓಸ್ಕರ್ ಗ್ರೋನಿಂಗ್ ಸಲ್ಲಿಸಿದ ದಯಾ ಅರ್ಜಿ ತಿರಸ್ಕೃತವಾಗಿದೆ ಎಂದು ಜರ್ಮನ್ ಮಾಧ್ಯಮ ಮತ್ತು ಪ್ರಾಸಿಕ್ಯೂಟರ್‌ಗಳು ಬುಧವಾರ ಹೇಳಿದ್ದಾರೆ.

ಆಶ್ವಿಝ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಓಸ್ಕರ್‌ಗೆ 2015ರಲ್ಲಿ 4 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿತ್ತು.

ಓಸ್ಕರ್ ಗ್ರೋನಿಂಗ್‌ನನ್ನು ‘ಬುಕ್‌ಕೀಪರ್ ಆಫ್ ಆಶ್ವಿಝ್’ (ಆಶ್ವಿಝ್‌ನ ಲೆಕ್ಕ ಬರೆಯುವವ) ಎಂಬುದಾಗಿ ಬಣ್ಣಿಸಲಾಗಿದೆ.

ಆದರೆ, ಅವನ ಆರೋಗ್ಯದ ಬಗ್ಗೆ ವಿವಾದಗಳು ಇರುವ ಹಿನ್ನೆಲೆಯಲ್ಲಿ ಶಿಕ್ಷೆ ಇನ್ನೂ ಆರಂಭವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News