ಝಿಂಬಾಬ್ವೆ ವಿರುದ್ಧ ಭಾರತಕ್ಕೆ ಜಯ: ಕ್ವಾ.ಫೈನಲ್‌ ಗೆ ಲಗ್ಗೆ

Update: 2018-01-19 18:14 GMT

ವೌಂಟ್ ವೌಂಗ್‌ನುಯಿ, ಜ.19: ಭಾರತದ ಅಂಡರ್-19 ತಂಡ ಮತ್ತೊಮ್ಮೆ ಅತ್ಯುತ್ತಮ ಪ್ರದರ್ಶನ ನೀಡಿದ್ದು, ವಿಶ್ವಕಪ್‌ನ ಡಿ ಗ್ರೂಪ್‌ನ ಕೊನೆಯ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ. ಅಗ್ರ ಸ್ಥಾನದೊಂದಿಗೆ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ.

  ಶುಕ್ರವಾರ ಗೆಲುವಿಗೆ 155 ರನ್‌ಗಳ ಸವಾಲನ್ನು ಪಡೆದ ಭಾರತ 21.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವಿಗೆ ಅಗತ್ಯದ ರನ್ ಸೇರಿಸಿತು. ಹಾರ್ದಿಕ್ ದೇಸಾಯಿ ಔಟಾಗದೆ 56 ರನ್(88ನಿ, 73ಎ, 8ಬೌ, 1ಸಿ) ಮತ್ತು ಶುಬ್‌ಮನ್ ಗಿಲ್ ಔಟಾಗದೆ 90 ರನ್(88ನಿ, 59ಎ, 14 ಬೌ, 1ಸಿ) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

 ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದ ಶುಬ್‌ಮನ್ ಗಿಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

     ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಝಿಂಬಾಬ್ವೆ ತಂಡ ಅನುಕೂಲ್ ರಾಯ್(20ಕ್ಕೆ 4) ದಾಳಿಗೆ ಸಿಲುಕಿ 48.1 ಓವರ್‌ಗಳಲ್ಲಿ 154 ರನ್‌ಗಳಿಗೆ ಆಲೌಟಾ ಗಿತ್ತು. ಮಿಲ್ಟಾನ್ ಶುಂಬಾ (36), ಲಿಯಾಮ್ ರೋಚೆ (31), ವೆಸ್ಲೀ ಮಧವೀರೆ (30) ಎರಡಂಕೆಯ ಸ್ಕೋರ್ ಗಳಿಸಿದರು. ಭಾರತದ ದಾಳಿಯನ್ನು ಎದುರಿಸಲಾರದೆ ಝಿಂಬಾಬ್ವೆ ತಂಡ ಬೇಗನೆ ಇನಿಂಗ್ಸ್ ಮುಗಿಸಿತು. ತಂಡದ ಮೊತ್ತ 2.2 ಓವರ್‌ಗಳಲ್ಲಿ 7 ಆಗಿದ್ದಾಗ ಮೊದಲ ವಿಕೆಟ್ ಪತನಗೊಂಡಿತು. 61ಕ್ಕೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಝಿಂಬಾಬ್ವೆ ಪರ ನಾಲ್ಕನೇ ವಿಕೆಟ್‌ಗೆ ಶುಂಬಾ ಮತ್ತು ರೋಚೆ 49 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 110ಕ್ಕೆ ಏರಿಸಿದರು.

ಸಂಕ್ಷಿಪ್ತ ಸ್ಕೋರ್

►ಝಿಂಬಾಬ್ವೆ 48.1 ಓವರ್‌ಗಳಲ್ಲಿ ಆಲೌಟ್ 154 (ಮಿಲ್ಟನ್ ಶುಂಬಾ 36, ಲಿಯಾಮ್ ರೋಚೆ 30, ವೆಸ್ಲೀ ಮಧವೀರೆ 30; ರಾಯ್ 20ಕ್ಕೆ 4, ಅರ್ಶದೀಪ್ ಸಿಂಗ್ 10ಕ್ಕೆ 2, ಅಭಿಷೇಕ್ ಶರ್ಮಾ 22ಕ್ಕೆ 2)

►ಪಂದ್ಯಶ್ರೇಷ್ಠ : ಶುಬ್‌ಮನ್ ಗಿಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News