×
Ad

ಪಾತಾಳಕ್ಕೆ ಕುಸಿದ ಟ್ರಂಪ್ ಜನಪ್ರಿಯತೆ

Update: 2018-01-20 20:22 IST

ವಾಶಿಂಗ್ಟನ್, ಜ. 20: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಒಂದು ವರ್ಷ ಪೂರೈಸುತ್ತಿರುವಂತೆಯೇ, ಆಧುನಿಕ ಇತಿಹಾಸದ ‘ಅತ್ಯಂತ ಅಪ್ರಸಿದ್ಧ ಅಧ್ಯಕ್ಷ’ನಾಗಿ ಅವರು ಹೊರಹೊಮ್ಮಿದ್ದಾರೆ ಎಂದು ವಿವಿಧ ಸಮೀಕ್ಷೆಗಳು ಹೇಳಿವೆ.

 ಎನ್‌ಬಿಸಿ ನ್ಯೂಸ್/ವಾಲ್ ಸ್ಟ್ರೀಟ್ ಜರ್ನಲ್ ಶುಕ್ರವಾರ ಬಿಡುಗಡೆ ಮಾಡಿದ ನೂತನ ಸಮೀಕ್ಷೆಯಂತೆ, ಟ್ರಂಪ್‌ರ ಕಾರ್ಯವಿಧಾನವನ್ನು ಕೇವಲ 39 ಶೇಕಡ ಅಮೆರಿಕನ್ನರು ಅಂಗೀಕರಿಸುತ್ತಾರೆ.

ಅಧಿಕಾರದಲ್ಲಿ ಕೇವಲ ಒಂದು ವರ್ಷ ಕಳೆದಿರುವ ಅಮೆರಿಕದ ಅಧ್ಯಕ್ಷರೊಬ್ಬರಿಗೆ ಸಮೀಕ್ಷೆಯಲ್ಲಿ ಲಭಿಸಿದ ಅತ್ಯಂತ ಕಡಿಮೆ ಪ್ರಮಾಣದ ಬೆಂಬಲ ಇದಾಗಿದೆ.

ಈ ಹಿಂದೆ ಎನ್‌ಬಿಸಿ ನ್ಯೂಸ್ ನಡೆಸಿದ ಸಮೀಕ್ಷೆಗಳ ಪ್ರಕಾರ, ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ ವೇಳೆ, ಜಾರ್ಜ್ ಡಬ್ಲು. ಬುಶ್ 82 ಶೇಕಡ, ಬಿಲ್ ಕ್ಲಿಂಟನ್ 60 ಶೇಕಡ ಮತ್ತು ಬರಾಕ್ ಒಬಾಮ 50 ಶೇಕಡ ಜನಪ್ರಿಯತೆ ಹೊಂದಿದ್ದರು.ಅಧಿಕಾರದ ಮೊದಲ ವರ್ಷದಲ್ಲಿ ಅಮೆರಿಕದಲ್ಲಿ ನಡೆಸಲಾದ ವಿವಿಧ ಸಮೀಕ್ಷೆಗಳಲ್ಲಿ ಟ್ರಂಪ್‌ರ ಜನಪ್ರಿಯತೆ ತೀರಾ ಕೆಳಗೆ ಕುಸಿದಿದೆ.

ಎನ್‌ಬಿಸಿ/ವಾಲ್ ಸ್ಟ್ರೀಟ್ ಜರ್ನಲ್‌ನ ಸಮೀಕ್ಷೆಗೆ ಪ್ರತಿಕ್ರಿಯಿಸಿದ 57 ಶೇಕಡ ಮಂದಿ, ತಾವು ಟ್ರಂಪ್‌ರನ್ನು ಅಂಗೀಕರಿಸುವುದಿಲ್ಲ ಎಂದು ಹೇಳಿದ್ದಾರೆ.ಟ್ರಂಪ್‌ರನ್ನು ಅನುಮೋದಿಸುವುದಾಗಿ 46 ಶೇಕಡ ಪುರುಷರು ಹೇಳಿದರೆ, ಕೇವಲ 33 ಶೇಕಡ ಮಹಿಳೆಯರು ಟ್ರಂಪ್‌ರನ್ನು ಬೆಂಬಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News