ಎಚ್-1ಬಿ ವೀಸಾದಾರರ ಸಂಗಾತಿಗೆ ಉದ್ಯೋಗ ಪರವಾನಿಗೆ ನೀಡಿ
Update: 2018-01-20 22:04 IST
ವಾಶಿಂಗ್ಟನ್, ಜ. 20: ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳು ಅಮೆರಿಕದಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡಲು ಅವಕಾಶ ನೀಡುವ ಒಬಾಮ ಆಡಳಿತದ ನೀತಿಯೊಂದನ್ನು ಉಳಿಸಿಕೊಳ್ಳುವಂತೆ ಆ್ಯಪಲ್, ಮೈಕ್ರೊಸಾಫ್ಟ್, ಫೇಸ್‌ಬುಕ್ ಮತ್ತು ಗೂಗಲ್‌ಗಳನ್ನು ಪ್ರತಿನಿಧಿಸುವ ಅಮೆರಿಕದ ತಂತ್ರಜ್ಞಾನ ಕಾರ್ಮಿಕ ಗುಂಪುಗಳು ಟ್ರಂಪ್ ಆಡಳಿತವನ್ನು ಒತ್ತಾಯಿಸಿವೆ.
ಎಚ್-1ಬಿ ವೀಸಾದಾರರ ಸಂಗಾತಿಗಳು ಅಮೆರಿಕದಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡಲು ಅವಕಾಶ ನೀಡುವ ಎಚ್-4 ವೀಸಾ ಕಾರ್ಯಕ್ರಮವನ್ನು ಉಳಿಸಿಕೊಳ್ಳುವಂತೆ ಒತ್ತಾಯಿಸಿ ಇನ್‌ಫಾರ್ಮೇಶನ್ ಟೆಕ್ನಾಲಜಿ ಇಂಡಸ್ಟ್ರಿ ಕೌನ್ಸಿಲ್, ಯುಎಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಬಿಎಸ್‌ಎ ಸಂಘಟನೆಗಳು ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆಗೆ ಪತ್ರ ಬರೆದಿವೆ.
ಎಚ್-1ಬಿ ವೀಸಾದಾರರ ಪತ್ನಿ/ಪತಿಯಂದಿರಿಗೆ ಕೆಲಸದ ಪರವಾನಿಗೆಯನ್ನು ನೀಡದಿರಲು ಟ್ರಂಪ್ ಆಡಳಿತ ನಿರ್ಧರಿಸಿರುವುದನ್ನು ಸ್ಮರಿಸಬಹುದಾಗಿದೆ.