ಭಾರತ, ಐರೋಪ್ಯೇತರ ದೇಶಗಳಿಂದ ಲಂಡನ್‌ಗೆ ದೇಣಿಗೆ

Update: 2018-01-22 16:59 GMT

 ಲಂಡನ್, ಜ. 22: ಭಾರತ ಮತ್ತು ಐರೋಪ್ಯ ಒಕ್ಕೂಟಕ್ಕೆ ಸೇರದ ಇತರ ದೇಶಗಳು ಲಂಡನ್‌ನ ಆರ್ಥಿಕತೆಗೆ ಪ್ರತಿ ವರ್ಷ 4.6 ಬಿಲಿಯ ಪೌಂಡ್ (ಸುಮಾರು 40,936 ಕೋಟಿ ರೂಪಾಯಿ) ದೇಣಿಗೆ ನೀಡುತ್ತಿವೆ ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ಹೇಳಿದ್ದಾರೆ.

ವಿದೇಶಿ ವಿದ್ಯಾರ್ಥಿಗಳು ನೀಡುವ ಆರ್ಥಿಕ ಮತ್ತು ಇತರ ದೇಣಿಗೆಗಳ ಬಗ್ಗೆ ಖಾನ್ ಮತ್ತು ಇಂಗ್ಲೆಂಡ್‌ನ ಇತರ ಪ್ರಮುಖ ವಲಯಗಳ ಐವರು ಮೇಯರ್‌ಗಳು ‘ಫೈನಾನ್ಶಿಯಲ್ ಟೈಮ್ಸ್’ಗೆ ಬರೆದ ಬಹಿರಂಗ ಪತ್ರವೊಂದರಲ್ಲಿ ಈ ವಿಷಯ ತಿಳಿಸಿದ್ದಾರೆ.

ಲಂಡನ್ ಮತ್ತು ಇತರ ಐದು ವಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುವ ಭಾರೀ ಸಂಖ್ಯೆ ವಿಶ್ವವಿದ್ಯಾನಿಲಯಗಳಿವೆ.

ಆದರೆ, ಜನರು ಬ್ರಿಟನ್‌ಗೆ ವಲಸೆ ಬರುವುದನ್ನು ತಡೆಯುವುದಕ್ಕಾಗಿ ವಲಸೆ ನಿರ್ಬಂಧ ಹೇರಿದ ಬಳಿಕ 2010ರಿಂದ ಬ್ರಿಟನ್‌ನಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಕಡಿತ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News