ವೀಸಾ ಲಾಟರಿ ವ್ಯವಸ್ಥೆಗೆ ಕೊನೆ: ಟ್ರಂಪ್ ಇಂಗಿತ

Update: 2018-01-26 17:05 GMT

ವಾಶಿಂಗ್ಟನ್, ಜ. 26: ಅತ್ಯುನ್ನತ ಕೌಶಲ ಹೊಂದಿರುವ ಕೆಲಸಗಾರರಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ, ವೀಸಾ ಲಾಟರಿ ವ್ಯವಸ್ಥೆಯನ್ನು ಕೊನೆಗೊಳಿಸುವ ಇಂಗಿತವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.

ಈ ಕ್ರಮವು ಗ್ರೀನ್ ಕಾರ್ಡ್ (ಅಮೆರಿಕ ಪೌರತ್ವ)ಗಳಿಗಾಗಿ ದಶಕಗಳಿಂದ ಕಾಯುತ್ತಿರುವ ಸಾವಿರಾರು ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ಲಾಭ ತರಲಿದೆ.

ಇದು ಕಾಂಗ್ರೆಸ್‌ನಿಂದ ಅಂಗೀಕಾರಗೊಂಡು ಕಾನೂನಾದರೆ, ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಗ್ರೀನ್ ಕಾರ್ಡ್ ಸರದಿಯನ್ನು ಕಡಿಮೆಗೊಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News