ಫೆಡರರ್‌ಗೆ 20ನೇ ಗ್ರ್ಯಾನ್ ಸ್ಲಾಮ್ ಕಿರೀಟ

Update: 2018-01-28 12:16 GMT

ಮೆಲ್ಬೋರ್ನ್, ಜ.28: ಸ್ವಿಸ್ ಆಟಗಾರ ರೋಜರ್ ಫೆಡರರ್ ರವಿವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಫೈನಲ್ ನಲ್ಲಿ ಕ್ರೊಯೇಶಿಯಾದ ಮರಿನ್ ಸಿಲಿಕ್ ಅವರನ್ನು ಮಣಿಸುವ ಮೂಲಕ 20ನೇ  ಗ್ರ್ಯಾನ್ ಸ್ಲಾಮ್  ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಫೈನಲ್‌ನಲ್ಲಿ ಫೆಡರರ್ ಅವರು ಸಿಲಿಕ್ ಅವರನ್ನು 6-2, 6-7(5), 6-3, 3-6, 6-1 ಅಂತರದಲ್ಲಿ ಮಣಿಸಿ ಆರನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

36ರ ಹರೆಯದ ಹಾಲಿ ಚಾಂಪಿಯನ್ ಫೆಡರರ್ ಅವರನ್ನು ಸೋಲಿಸಿ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್  ಗ್ರ್ಯಾನ್ ಸ್ಲಾಮ್    ಜಯಿಸುವ ಸಿಲಿಕ್ ಅವರ ಪ್ರಯತ್ನ ಫಲ ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News