ಟರ್ಕಿ: ರಾಕೆಟ್ ದಾಳಿಗೆ ಬಾಲಕಿ ಬಲಿ

Update: 2018-01-31 17:50 GMT

ಅಂಕಾರ,ಜ.29: ಉತ್ತರ ಸಿರಿಯದಿಂದ ಟರ್ಕಿಯ ಗಡಿಭಾಗದ ಪಟ್ಟಣವೊಂದರ ಮೇಲೆ ಬುಧವಾರ ನಡೆದ ರಾಕೆಟ್ ದಾಳಿಯಲ್ಲಿ ಓರ್ವ ಬಾಲಕಿ ಮೃತಪಟ್ಟಿದ್ದು ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ.

ಟರ್ಕಿಯ ಗಡಿ ಪಟ್ಟಣಗಳಾದ ರೆಹಾನ್ಲಿ ಹಾಗೂ ಕಿಲಿಸ್‌ಗಳ ಮೇಲೆ ಜನವರಿ 20ರಿಂದೀಚೆಗೆ ಸರಣಿ ರಾಕೆಟ್ ದಾಳಿಗಳು ನಡೆಯುತ್ತಿವೆ. ಆಫ್ರಿನ್ ಪ್ರದೇಶದಲ್ಲಿ ಟರ್ಕಿಯ ಪಡೆಗಳು ಸಿರಿಯನ್ ಕುರ್ದಿಶ್ ಬಂಡುಕೋರರನ್ನು ಹೊರದಬ್ಬಲು ಸೇನಾ ಕಾರ್ಯಾಚರಣೆ ನಡೆಸಿದ ಬಳಿಕ ಈ ಪಟ್ಟಣಗಳು ಕ್ಷಿಪಣಿ ದಾಳಿಗಳಿಗೆ ತುತ್ತಾಗುತ್ತಿವೆ.

  ಆಫ್ರಿನ್‌ನಲ್ಲಿರುವ ಸಿರಿಯದ ಕುರ್ದಿಶ್ ಬಂಡುಕೋರರು ಬುಧವಾರ ಎರಡು ರಾಕೆಟ್‌ಗಳನ್ನು ಎಸೆದಿರುವುದಾಗಿ ಟರ್ಕಿಯ ಸುದ್ದಿಸಂಸ್ಥೆ ‘ಅನಾಡೊಲ್ ಏಜೆನ್ಸಿ ವರದಿ ಮಾಡಿದೆ. ದಾಳಿಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರ ಪೈಕಿ 17 ವರ್ಷದ ಬಾಲಕಿ ಫಾತಿಮಾ ಅವ್ಲಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿಗಳು ತಿಳಿಸಿವೆ.ಟರ್ಕಿಯ ಮೇಲೆ ಶಂಕಿತ ಕುರ್ದಿಶ್ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News