ಉ.ಕೊರಿಯದ ನಿಷ್ಠಾಂತರಿಗೆ ಟ್ರಂಪ್ ಪ್ರಶಂಸೆ
ವಾಶಿಂಗ್ಟನ್,ಜ.31: ವಾಶಿಂಗ್ಟನ್ ಹಾಗೂ ಯೊಂಗ್‌ಯಾಂಗ್ ನಡುವೆ ಅಣ್ವಸ್ತ್ರ ಬಿಕ್ಕಟ್ಟು ಉದ್ವಿಗ್ನ ಗೊಂಡಿರುವಂತೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಂಗಳವಾರ ತನ್ನ ಯೂನಿಯನ್ ಆಫ್ ಸ್ಟೇಟ್ ಭಾಷಣದಲ್ಲಿ ಉತ್ತರ ಕೊರಿಯದಿಂದ ನಿಷ್ಠಾಂತರ ಮಾಡಿರುವ ಜೆ ಸಿಯೊಂಗ್ ಹೊ ಅವರನ್ನು ಗೌರವಿಸಿದ್ದಾರೆ. 2006ರಲ್ಲಿ ಉತ್ತರ ಕೊರಿಯದಿಂಂದ ಪಲಾಯನಗೈದು, ದ.ಕೊರಿಯಕ್ಕೆ ಬಂದು ನೆಲೆಸಿದ ಜಿ ಸೆಯೊಂಗ್ ಹೊ ಅವರಿಗೆ, ಟ್ರಂಪ್ ಭಾಷಣದ ವೇಳೆ, ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಅವರಿಂದ ಕೆಲವೇ ಆಸನಗಳ ಆಂತರದಲ್ಲಿ ಗೌರವದ ಸ್ಥಾನವನ್ನು ನೀಡಲಾಗಿತ್ತು. ತನ್ನ ಭಾಷಣದಲ್ಲಿ ಟ್ರಂಪ್ ಅವರು ಉತ್ತರ ಕೊರಿಯದ ನಿರಂಕುಶ ಆಡಳಿತದ ವಿರುದ್ಧ ಸಿಯೊಂಗ್ ನಡೆಸುತ್ತಿರುವ ಹೋರಾಟವನ್ನು ಶ್ಲಾಘಿಸಿದರು.
ನೆರೆಯ ಚೀನಾಕ್ಕೆ ಅಲ್ಪಾವಧಿಗೆ ಭೇಟಿ ನೀಡಿದ್ದಕ್ಕಾಗಿ ಉತ್ತರ ಕೊರಿಯ ಆಡಳಿತವು ಸಿಯೊಂಗ್ ಅವರನ್ನು ಬಂಧಿಸಿ ಚಿತ್ರಹಿಂಸೆ ನೀಡಿತ್ತೆಂದು ಟ್ರಂಪ್ ಹೇಳಿದರು. ಆನಂತ ರ ಸಿಯೊಂಗ್ ಉತ್ತರ ಕೊರಿಯದಿಂದ ಪಲಾಯನಗೈದು, ನೆರೆಯ ರಾಷ್ಟ್ರವಾದ ಸೋಲ್‌ನಲ್ಲಿ ಬಂದು ನೆಲೆಸಿದ್ದರು. ಪ್ರಸ್ತುತ ಸೋಲ್‌ನಲ್ಲಿ ನೆಲೆಸಿರುವ ಸೊಂಗ್ ಅವರು, ಉ.ಕೊರಿಯದಿಂದ ನಿಷ್ಠಾಂತರ ಮಾಡುತ್ತಿರುವವರಿಗೆ ನೆರವಾಗುತ್ತಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಹಾತೊರಿಯುವ ಪ್ರತಿಯೊಂದು ಮಾನವ ಚೇತನಗಳಿಗೆ ಸಿಯೊ ಹೊ ಅವರ ಕಥೆಯು ಉತ್ತಮ ನಿದರ್ಶನವಾಗಿದೆಯೆಂದು ಟ್ರಂಪ್ ಬಣ್ಣಿಸಿದರು.