×
Ad

ಮೊದಲ ಏಕದಿನ ಪಂದ್ಯದಲ್ಲಿ ಡು ಪ್ಲೆಸಿಸ್ ಶತಕ; ದ.ಆಫ್ರಿಕ 269/8

Update: 2018-02-01 20:31 IST

ಡರ್ಬನ್, ಫೆ.1: ನಾಯಕ ಡು ಪ್ಲೆಸಿಸ್ ದಾಖಲಿಸಿದ ಆಕರ್ಷಕ ಶತಕದ ನೆರವಿನಲ್ಲಿ ದಕ್ಷಿಣ ಆಫ್ರಿಕ ತಂಡ ಇಲ್ಲಿ ಆರಂಭಗೊಂಡ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ಭಾರತಕ್ಕೆ ಕಠಿಣ ಸವಾಲು ವಿಧಿಸಿದೆ.

ಭಾರತ ಗೆಲುವಿಗೆ 270 ರನ್‌ಗಳನ್ನು ಗಳಿಸಬೇಕಾಗಿದೆ.

ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕ ತಂಡ ಪ್ಲೆಸಿಸ್ ಶತಕದ ಸಹಾಯದಿಂದ ನಿಗದಿತ 50 ಓವರ್‌ಗಳಲ್ಲಿ 8ವಿಕೆಟ್ ನಷ್ಟದಲ್ಲಿ 269 ರನ್ ಗಳಿಸಿತು.

ಪ್ಲೆಸಿಸ್ 120 ರನ್ (112ಎ, 11ಬೌ,2ಸಿ) ಗಳಿಸಿ ಔಟಾದರು.

ಪ್ಲೆಸಿಸ್ ಭಾರತದ ವಿರುದ್ಧ ತನ್ನ ಅಪೂರ್ವ ಫಾರ್ಮ್‌ನ್ನು ಮುಂದುವರಿಸಿ 101 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ 9ನೇ ಶತಕ ಪೂರ್ಣಗೊಳಿಸಿದರು.

ಕ್ವಿಂಟನ್ ಡೆ ಕಾಕ್ 34 ರನ್ , ಹಾಶಿಮ್ ಅಮ್ಲ 16, ಮರ್ಕರಮ್ 9ರನ್, ಜೆ.ಪಿ.ಡುಮಿನಿ 12ರನ್, ಡೇವಿಡ್ ಮಿಲ್ಲರ್ 7 ರನ್, ಕ್ರಿಸ್ ಮೊರಿಸ್ 37ರನ್, ರಬಾಡ 1 ರನ್ ಗಳಿಸಿ ಔಟಾದರು.

ಫೆಹ್ಲುಕ್ವಾವೊ ಅವರು ಔಟಾಗದೆ 27 ರನ್ ಗಳಿಸಿದರು.ಭಾರತದ ಪರ ಕುಲ್‌ದೀಪ್ ಯಾದವ್ 34ಕ್ಕೆ 3, ಚಹಾಲ್ 45ಕ್ಕೆ 2 , ಭುವನೇಶ್ವರ ಕುಮಾರ್ ಮತ್ತು ಜಸ್‌ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News