ಕೊಹ್ಲಿ, ಚಂದ್ ದಾಖಲೆ ಮುರಿದ ಪೃಥ್ವಿ ಶಾ

Update: 2018-02-03 15:51 GMT

ಮೌಂಟ್ ಮೌಂಗಾನುಯಿ , ಫೆ.3: ಇಲ್ಲಿ ನಡೆದ ವಿಶ್ವಕಪ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಭಾರತದ ಅಂಡರ್-19 ತಂಡ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸಿ ಇತಿಹಾಸ ನಿರ್ಮಿಸಿದೆ.

ಶಾ ನಾಯಕರಾಗಿ ಈ ಟೂರ್ನಮೆಂಟ್‌ನಲ್ಲಿ 261 ರನ್ ಗಳಿಸಿದ್ದಾರೆ. ಇದರೊಂದಿಗೆ ಅಂಡರ್-19 ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಮತ್ತು ಉನ್ಮುಕ್ತ್ ಚಂದ್ ದಾಖಲೆ ಮುರಿದಿದ್ದಾರೆ.

ಪೃಥ್ವಿ ಶಾ ನೇತೃತ್ವದ ಭಾರತದ ತಂಡ ಟೂರ್ನಮೆಂಟ್‌ನಲ್ಲಿ ಅಜೇಯ ಗೆಲುವಿನೊಂದಿಗೆ ಪ್ರಶಸ್ತಿ ಜಯಿಸಿದೆ. ಇದರೊಂದಿಗೆ ಮಾಜಿ ನಾಯಕ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ

 ಉಪ ನಾಯಕ ಶುಬ್‌ಮನ್ ಗಿಲ್ ಅವರು ಗ್ರೂಪ್ ಹಂತ ಮತ್ತು ಸೆಮಿಫೈನಲ್‌ನಲ್ಲಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದರು. ಫೈನಲ್‌ನಲ್ಲಿ ಹೊಸ ಹೀರೊ ಮನ್‌ಜೋತ್ ಕಾಲ್ರಾ ಅಜೇಯ ಶತಕದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಟಾಸ್ ಜಯಿಸಿದ ಆಸ್ಟ್ರೇಲಿಯ ಬ್ಯಾಟಿಂಗ್ ಆಯ್ದುಕೊಂಡು ಭಾರತಕ್ಕೆ ಕಠಿಣ ಸವಾಲು ವಿಧಿಸುವ ಕಡೆಗೆ ಪ್ರಯತ್ನ ನಡೆಸಿತ್ತು. ಆದರೆ ಆರಂಭದಲ್ಲೇ ತಂಡದ ಪ್ರಯತ್ನ ಫಲ ನೀಡಲಿಲ್ಲ. ಕೇವಲ 59 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ತಂಡದ ಲೆಕ್ಕಾಚಾರ ಕೆಳಗಾಯಿತು. ಜೋನಾಥನ್ ಮೆಲ್ರೊ ಏಕಾಂಗಿ ಹೋರಾಟ ನಡೆಸಿದರು. ಆದರೆ ಅವರಿಗೆ ತಂಡದ ಸಹ ಆಟಗಾರರಿಂದ ಉತ್ತಮ ಬೆಂಬಲ ದೊರೆಯಲಿಲ್ಲ. ಆಸ್ಟ್ರೇಲಿಯ ಕೇವಲ 216 ರನ್‌ಗಳಿಗೆ ಆಲೌಟಾಯಿತು.

   ಇದಕ್ಕೆ ಉತ್ತರವಾಗಿ ಭಾರತ ಶಾ, ಗಿಲ್ ಮತ್ತು ದೇಸಾಯಿ ಕೊಡುಗೆ ಇದರ ಕಾಲ್ರಾ ಅವರ ಶತಕದ ನೆರವಿನಲ್ಲಿ ಭಾರತ ಇನ್ನೂ 11.5 ಓವರ್‌ಗಳು ಬಾಕಿ ಇರುವಾಗಲೇ ಭಾರತ ಕೇವಲ 2 ವಿಕೆಟ್ ನಷ್ಟದಲ್ಲಿ 220 ರನ್ ಗಳಿಸಿ ಗೆಲುವಿನ ನಗೆ ಬೀರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News