×
Ad

ಉನ್ಮುಕ್ತ್ ಚಂದ್ ಶತಕ; ದಿಲ್ಲಿಗೆ ಭರ್ಜರಿ ಜಯ

Update: 2018-02-05 23:42 IST

ಬಿಲಾಸ್ಪುರ, ಫೆ.5: ಮುಖಕ್ಕೆ ಗಾಯವಾಗಿದ್ದರೂ ಶತಕ ಸಿಡಿಸಿದ ಆರಂಭಿಕ ಆಟಗಾರ ಉನ್ಮುಕ್ತ್ ಚಂದ್ ಸಾಹಸದ ನೆರವಿನಿಂದ ದಿಲ್ಲಿ ಕ್ರಿಕೆಟ್ ತಂಡ ವಿಜಯ್ ಹಝಾರೆ ಏಕದಿನ ಟೂರ್ನಮೆಂಟ್‌ನಲ್ಲಿ ಉತ್ತರಪ್ರದೇಶ ವಿರುದ್ಧ 56 ರನ್‌ಗಳಿಂದ ಜಯ ಸಾಧಿಸಿದೆ.

ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಿಲ್ಲಿ ತಂಡ ಚಂದ್ ಹಾಗೂ ದಲಾಲ್(57,64 ಎಸೆತ, 8 ಬೌಂಡರಿ) ಮೊದಲ ವಿಕೆಟ್‌ಗೆ ಸೇರಿಸಿದ 107 ರನ್ ಜೊತೆಯಾಟದ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 307 ರನ್ ಗಳಿಸಿತು.

ಗೆಲ್ಲಲು 308 ರನ್ ಗುರಿ ಪಡೆದ ಉತ್ತರಪ್ರದೇಶ ತಂಡ ಉಮಂಗ್ ಶರ್ಮ(102,104 ಎಸೆತ) ಹಾಗೂ ನಾಯಕ ಅಕ್ಷದೀಪ್ ನಾಥ್(54, 49 ಎಸೆತ)ಹೋರಾಟದ ಹೊರತಾಗಿಯೂ 45.3 ಓವರ್‌ಗಳಲ್ಲಿ 252 ರನ್‌ಗೆ ಆಲೌಟಾಯಿತು.

ದಿಲ್ಲಿ ಬೌಲರ್‌ಗಳಾದ ಕುಲ್ವಂತ್ ಖೆಜ್ರೋಲಿಯ(4-34) ಹಾಗೂ ಪ್ರದೀಪ್ ಸಾಂಗ್ವಾನ್(3-28)ಏಳು ವಿಕೆಟ್ ಹಂಚಿಕೊಂಡರು.

ದಿಲ್ಲಿ ಬ್ಯಾಟಿಂಗ್‌ನಲ್ಲಿ ಧುೃವ್ ಶೋರೆ(31),ನಿತಿನ್ ರಾಣಾ(31), ರಿಷಬ್ ಪಂತ್(28) ಎರಡಂಕೆಯ ಸ್ಕೋರ್ ದಾಖಲಿಸಿದರು. ಉತ್ತರಪ್ರದೇಶದ ಪರ ರಾಜ್‌ಪೂತ್(2-61) ಹಾಗೂ ಕಾರ್ತಿಕ್ ತ್ಯಾಗಿ (2-50) ತಲಾ ಎರಡು ವಿಕೆಟ್ ಪಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರ್

►ದಿಲ್ಲಿ: 50 ಓವರ್‌ಗಳಲ್ಲಿ 307/6

(ಉನ್ಮುಕ್ತ್ ಚಂದ್ 116, ದಲಾಲ್ 57, ಶೋರೆ 31, ರಾಣಾ 31, ಪಂತ್ 28, ರಾಜ್‌ಪೂತ್ 2-61, ಕಾರ್ತಿಕ್ 2-50)

ಉತ್ತರ ಪ್ರದೇಶ: 45.3 ಓವರ್‌ಗಳಲ್ಲಿ 252 ರನ್‌ಗೆ ಆಲೌಟ್

(ಉಮಂಗ್ ಶರ್ಮ 102, ಅಕ್ಷದೀಪ್ ನಾಥ್ 54, ಖೆಜ್ರೋಲಿಯ 4-34, ಪ್ರದೀಪ್ ಸಾಂಗ್ವಾನ್3-28)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News