ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಬೊಲ್ಲಿಂಜರ್ ನಿವೃತ್ತಿ

Update: 2018-02-05 18:38 GMT

ಮೆಲ್ಬೋರ್ನ್, ಫೆ.5: ಆಸ್ಟ್ರೇಲಿಯದ ಮಾಜಿ ಟೆಸ್ಟ್ ಬೌಲರ್ ಡಗ್ ಬೊಲ್ಲಿಂಜರ್ ಸೋಮವಾರ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

ಬೊಲ್ಲಿಂಜರ್ ಆಸ್ಟ್ರೇಲಿಯದ ಪರ 12 ಟೆಸ್ಟ್ ಹಾಗೂ 39 ಏಕದಿನ ಪಂದ್ಯಗಳನ್ನು ಆಡಿದ್ದು ತನ್ನ 36ನೇ ವಯಸ್ಸಿನಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಆಸ್ಟ್ರೇಲಿಯದ ದೇಶೀಯ ಕ್ರಿಕೆಟ್ ಟೂರ್ನಮೆಂಟ್ ಶೀಫೀಲ್ಡ್ ಶೀಲ್ಡ್ ಆರಂಭಕ್ಕೆ ಒಂದು ವಾರ ಬಾಕಿ ಇರುವಾಗ ಬೊಲ್ಲಿಂಗರ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

 ‘‘ಆಸ್ಟ್ರೇಲಿಯ ಪರ ಟೆಸ್ಟ್ ಕ್ರಿಕೆಟ್ ಆಡುವ ಮೂಲಕ ನಾನು ಹಲವು ದಿಗ್ಗಜ ಆಟಗಾರರನ್ನು ಭೇಟಿಯಾಗಿದ್ದು, ಉದ್ದೇಶಿತ ಗುರಿ ಈಡೇರಿಸಿಕೊಂಡಿದ್ದೇನೆ. ಕ್ರಿಕೆಟ್‌ನಲ್ಲಿ ನನಗೆ ಉತ್ತಮ ಅವಕಾಶ ಲಭಿಸಿತ್ತು. ನ್ಯೂ ಸೌಥ್ ವೇಲ್ಸ್ ತಂಡದಲ್ಲಿ ನನ್ನ ಮೊದಲ ನಾಯಕ ಸ್ಟೀವ್‌ವಾ. ಅದೊಂದು ನಂಬಲಸಾಧ್ಯ ವಿಷಯ. ನಾನು ಹಲವು ಶ್ರೇಷ್ಠ ನಾಯಕರೊಂದಿಗೆ ಆಡಿದ್ದೇನೆ. ಸ್ಟೀವ್, ಮೈಕಲ್ ಕ್ಲಾರ್ಕ್ ಹಾಗೂ ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಡುವ ಅವಕಾಶ ಲಭಿಸಿತ್ತು. ನನ್ನ ತವರು ಮೈದಾನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ 15 ರಿಂದ 16 ವರ್ಷ ಆಡಿರುವುದು ನನ್ನ ಪಾಲಿಗೆ ಅಪೂರ್ವವಾದುದು’’ ಎಂದು ಬೊಲ್ಲಿಂಜರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News