ದೀಪಾ ಕರ್ಮಾಕರ್ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಕ್ಕೆ

Update: 2018-02-13 18:18 GMT

ಹೊಸದಿಲ್ಲಿ, ಫೆ.13: ಭಾರತದ ಅಗ್ರಮಾನ್ಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮೊಣಗಂಟಿನ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ ಎಂದು ಕೋಚ್ ಬಿಶ್ವೇಶ್ವರ್ ನಂದಿ ಮಂಗಳವಾರದಂದು ತಿಳಿಸಿದ್ದಾರೆ.

ಗಾಯದ ಸಮಸ್ಯೆಯಿಂದ ಹೊರಗುಳಿಯಬೇಕಾಗಿ ಬಂದಿದೆ. ಹಾಗಾಗಿ ನಮ್ಮ ಮುಂದಿನ ಗುರಿ ಆಗಸ್ಟ್ 18ರಿಂದ ಸೆಪ್ಟೆಂಬರ್ 2ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ ಎಂದು ನಂದಿ ತಿಳಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಪ್ರಥಮ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ದೀಪಾ, 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಆನಂತರ ಅಭ್ಯಾಸದ ವೇಳೆ ದೀಪಾಗೆ ಗಾಯವಾಗಿದ್ದು ಇನ್ನೂ ಕೂಡಾ ಅವರು ಸಂಪೂರ್ಣವಾಗಿ ಚೇತರಿಕೆಯಾಗಿಲ್ಲ ಎಂದು ನಂದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News