ರೊಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಪಡೆಯಲು ಸಿದ್ಧ

Update: 2018-02-16 16:29 GMT

ಢಾಕಾ, ಫೆ. 16: ಮ್ಯಾನ್ಮಾರ್‌ನಲ್ಲಿ ಸೇನೆ ನಡೆಸಿದ ಹಿಂಸಾಚಾರಕ್ಕೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿರುವ ರೊಹಿಂಗ್ಯಾ ಮುಸ್ಲಿಮರನ್ನು ವಾಪಸ್ ಪಡೆಯಲು ಮ್ಯಾನ್ಮಾರ್ ಸಿದ್ಧವಾಗಿದೆ ಎಂಬುದಾಗಿ ಆ ದೇಶದ ಗೃಹ ಸಚಿವರು ಬಾಂಗ್ಲಾದೇಶದ ಅಧ್ಯಕ್ಷರಿಗೆ ಹೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಉಭಯ ದೇಶಗಳು ಸಹಿ ಹಾಕಿರುವ ಒಪ್ಪಂದದ ಅನುಸಾರ ರೊಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಪಡೆಯಲು ಮ್ಯಾನ್ಮಾರ್ ಸಿದ್ಧವಾಗಿದೆ ಎಂದು ಬಾಂಗ್ಲಾದೇಶ ಪ್ರವಾಸದಲ್ಲಿರುವ ಮ್ಯಾನ್ಮಾರ್ ಗೃಹ ಸಚಿವ ಕ್ಯಾವ್ ಸವ್ ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್‌ರಿಗೆ ತಿಳಿಸಿದರು ಎಂದು ಅಧ್ಯಕ್ಷರ ವಕ್ತಾರ ಜೋಯ್ನಲ್ ಅಬೆದಿನ್ ಶುಕ್ರವಾರ ತಿಳಿಸಿದರು.

ಕಳೆದ ವರ್ಷದ ಆಗಸ್ಟ್‌ನಲ್ಲಿ ಮ್ಯಾನ್ಮಾರ್‌ನಲ್ಲಿ ಹಿಂಸೆ ಸ್ಫೋಟಿಸಿದ ಬಳಿಕ ಆ ದೇಶದ ರಖೈನ್ ರಾಜ್ಯದಿಂದ ಸುಮಾರು 7 ಲಕ್ಷ ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News