ಕಾಮನ್ವೆಲ್ತ್ ಗೇಮ್ಸ್: ಭಾರತದ 225 ಅಥ್ಲೀಟ್ ಗಳ ಸ್ಪರ್ಧೆ

Update: 2018-02-17 18:08 GMT

ಹೊಸದಿಲ್ಲಿ, ಫೆ.17: ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್‌ನಲ್ಲಿ ಎ.4 ರಿಂದ 25ರ ತನಕ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ(ಸಿಡಬ್ಲುಜಿ) ಭಾರತದ ಕ್ರೀಡಾಪಟುಗಳಿಗೆ ಬಾಕ್ಸಿಂಗ್ ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಮೀಸಲು ಸ್ಥಾನದ ಸಂಖ್ಯೆಯನ್ನು ಹೆಚ್ಚಿ ಸಲು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್(ಸಿಜಿಎಫ್) ನಿರ್ಧರಿಸಿದೆ. ಹೀಗಾಗಿ ಭಾರತ ಈ ಬಾರಿ 225 ಅಥ್ಲೀಟ್‌ಗಳನ್ನು ಕಣಕ್ಕಿಳಿಸಲಿದೆ.

 ಮೀಸಲು ಸ್ಥಾನದ ಸಂಖ್ಯೆ ಹೆಚ್ಚಳ ಬಾಕ್ಸರ್‌ಗಳು ಹಾಗೂ ಅಥ್ಲೀಟ್‌ಗಳಿಗೆ ಶುಭ ಸುದ್ದಿಯಾಗಿದೆ. ಈ ಬಾರಿ ಭಾರತದ 225 ಅಥ್ಲೀಟ್‌ಗಳು ಗೋಲ್ಡ್‌ಕೋಸ್ಟ್‌ಗೆ ಪ್ರಯಾಣ ಬೆಳೆಸಲಿದ್ದಾರೆ. 2014ರ ಗ್ಲಾಸ್ಗೊ ಗೇಮ್ಸ್‌ನಲ್ಲಿ ಭಾರತ 215 ಸ್ಪರ್ಧಾಳುಗಳನ್ನು ಕಣಕ್ಕಿಳಿಸಿತ್ತು.

ಬಾಕ್ಸಿಂಗ್‌ನಲ್ಲಿ ಭಾರತದ ಮೀಸಲು ಸ್ಥಾನವನ್ನು ಹೆಚ್ಚಿಸಬೇಕೆಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಹಾಗೂ ಭಾರತದ ಬಾಕ್ಸಿಂಗ್ ಫೆಡರೇಶನ್ ಮಾಡಿರುವ ಮನವಿಯನ್ನು ಸಿಜಿಎಫ್ ಸ್ವೀಕರಿಸಿದೆ. ಕೋಟಾ ಸಂಖ್ಯೆಯನ್ನು 12ಕ್ಕೆ ಏರಿಸಿದೆ. ಹೀಗಾಗಿ ಓರ್ವ ಮಹಿಳಾ ಬಾಕ್ಸರ್ ಈ ಬಾರಿ ಹೆಚ್ಚುವರಿಯಾಗಿ ಸ್ಪರ್ಧಿಸಲಿದ್ದಾರೆ.

ಇದೇ ರೀತಿ ಅಥ್ಲೆಟಿಕ್ಸ್‌ಗಳಿಗೆ 7 ಹೆಚ್ಚುವರಿ ಮೀಸಲು ಸ್ಥಾನ ನೀಡಲಾಗಿದೆ. ಗ್ಲಾಸ್ಗೊದಲ್ಲಿ 32 ಅಥ್ಲೀಟ್‌ಗಳು ಸ್ಪರ್ಧಿಸಿದ್ದು, ಈ ಬಾರಿ 37 ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ. ಭಾರತಕ್ಕೆ ಈ ಮೊದಲು ಗೋಲ್ಡ್‌ಕೋಸ್ಟ್ ಗೇಮ್ಸ್‌ನಲ್ಲಿ 30 ಮೀಸಲು ಸ್ಥಾನ ನೀಡಲಾಗಿತ್ತು.

  ಬಾಸ್ಕೆಟ್‌ಬಾಲ್ ವಿಭಾಗದಲ್ಲಿ ಭಾರತದ ತಲಾ 12 ಪುರುಷ ಹಾಗೂ ಮಹಿಳಾ ಆಟಗಾರರ ತಂಡ ಭಾಗವಹಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News