ಮೊದಲ ಟ್ವೆಂಟಿ-20: ದಕ್ಷಿಣ ಆಫ್ರಿಕ ಗೆಲುವಿಗೆ 204 ರನ್ ಗುರಿ

Update: 2018-02-18 14:36 GMT

 ಜೋಹಾನ್ಸ್‌ಬರ್ಗ್, ಫೆ.18: ಆರಂಭಿಕ ಆಟಗಾರ ಶಿಖರ್ ಧವನ್(72, 39 ಎಸೆತ) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡದ ಗೆಲುವಿಗೆ 204 ರನ್ ಗುರಿ ನೀಡಿದೆ.

ರವಿವಾರ ಟಾಸ್ ಜಯಿಸಿದ ದಕ್ಷಿಣ ಆಫ್ರಿಕ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ(21)ಹಾಗೂ ಧವನ್72 (39 ಎಸೆತ, 10 ಬೌಂಡರಿ, 2 ಸಿಕ್ಸರ್) ರನ್ ಗಳಿಸಿದರು.

ರೋಹಿತ್ 9 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಿಡಿಸಿ ಬಿರುಸಿನ ಬ್ಯಾಟಿಂಗ್ ನಡೆಸಿದರೂ 2ನೇ ಓವರ್‌ನ 5ನೇ ಎಸೆತದಲ್ಲಿ ಜೂನಿಯರ್ ಡಾಲಾಗೆ ವಿಕೆಟ್ ಒಪ್ಪಿಸಿದರು.

ಭಾರತದ ಪರ ಧವನ್ ಏಕಾಂಗಿ ಹೋರಾಟ ನೀಡಿದ್ದು, ಮನೀಶ್ ಪಾಂಡೆ(ಔಟಾಗದೆ 29) ಹಾಗೂ ಹಾರ್ದಿಕ್ ಪಾಂಡ್ಯ(ಔಟಾಗದೆ 13) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ತಂಡಕ್ಕೆ ವಾಪಸಾಗಿರುವ ಸುರೇಶ್ ರೈನಾ(15), ನಾಯಕ ವಿರಾಟ್ ಕೊಹ್ಲಿ(26) ಹಾಗೂ ಎಂಎಸ್ ಧೋನಿ(16) ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಇದೇ ವೇಳೆ ದಕ್ಷಿಣ ಆಫ್ರಿಕದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಟ್ವೆಂಟಿ-20 ಸರಣಿಯಿಂದ ಹೊರ ನಡೆದಿದ್ದಾರೆ. 6ನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ವಿಲಿಯರ್ಸ್ ಇನ್ನೂ ಚೇತರಿಸಿಕೊಂಡಿಲ್ಲ.

ದಕ್ಷಿಣ ಆಫ್ರಿಕದ ಪರ ಜೂನಿಯರ್ ಡಾಲಾ(2-47) ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News