ಮೊದಲ ಟ್ವೆಂಟಿ-20: ದಕ್ಷಿಣ ಆಫ್ರಿಕ ವಿರುದ್ಧ ಭಾರತಕ್ಕೆ ಜಯ

Update: 2018-02-18 16:16 GMT

  ಜೋಹಾನ್ಸ್‌ಬರ್ಗ್, ಫೆ.18: ಆರಂಭಿಕ ಆಟಗಾರ ಶಿಖರ್ ಧವನ್(72, 39 ಎಸೆತ, 10 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಭುವನೇಶ್ವರ ಕುಮಾರ್ ಅತ್ಯುತ್ತಮ ಬೌಲಿಂಗ್(5-24) ನೆರವಿನಿಂದ ಭಾರತ ತಂಡ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡವನ್ನು 28 ರನ್‌ಗಳ ಅಂತರದಿಂದ ಮಣಿಸಿದೆ.

ಈ ಗೆಲುವಿನ ಮೂಲಕ ಭಾರತ 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಗೆಲ್ಲಲು 204 ರನ್ ಗುರಿ ಪಡೆದ ದಕ್ಷಿಣ ಆಫ್ರಿಕ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಲಷ್ಟೇ ಶಕ್ತವಾಯಿತು. ಆಫ್ರಿಕದ ಪರ ಆರಂಭಿಕ ಆಟಗಾರ ಹೆಂಡ್ರಿಕ್ಸ್(70,50 ಎಸೆತ, 8 ಬೌಂಡರಿ, 1 ಸಿಕ್ಸರ್) ಅಗ್ರ ಸ್ಕೋರರ್ ಎನಿಸಿಕೊಂಡರು. ಬೆಹರ್ದಿನ್(39), ಕ್ಲಾಸೆನ್(16) ಎರಡಂಕೆಯ ಸ್ಕೋರ್ ದಾಖಲಿಸಿದರು. ನಾಯಕ ಜೆಪಿ ಡುಮಿನಿ(3), ಡೇವಿಡ್ ಮಿಲ್ಲರ್(9)ವಿಫಲರಾದರು.

ಭಾರತದ ಪರ ವೇಗದ ಬೌಲರ್ ಭುವನೇಶ್ವರ್ 5 ವಿಕೆಟ್ ಗೊಂಚಲು ಪಡೆದು ಆಫ್ರಿಕವನ್ನು ಕಾಡಿದರು.

ಭಾರತ 203: ಇದಕ್ಕೆ ಮೊದಲು ಟಾಸ್ ಜಯಿಸಿದ ದಕ್ಷಿಣ ಆಫ್ರಿಕ ತಂಡದ ನಾಯಕ ಜೆಪಿ ಡುಮಿನಿ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News