3ನೆ ಮದುವೆಯಾದ ಇಮ್ರಾನ್ ಖಾನ್

Update: 2018-02-19 17:24 GMT

 ಇಸ್ಲಾಮಾಬಾದ್, ಫೆ. 19: ತನ್ನ ‘ಆಧ್ಯಾತ್ಮಿಕ ಗುರು’ ಬುಶ್ರಾ ಮನೇಕಾರನ್ನು ಲಾಹೋರ್‌ನಲ್ಲಿ ರವಿವಾರ ವಿವಾಹವಾಗಿರುವುದಾಗಿ ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನದ ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಘೋಷಿಸಿದ್ದಾರೆ.

ಇದು ತೆಹ್ರೀಕೆ ಇನ್ಸಾಫ್ ಪಕ್ಷದ ಮುಖ್ಯಸ್ಥನ 3ನೇ ವಿವಾಹವಾಗಿದೆ. ಅವರ ಪಕ್ಷವು ಮದುವೆ ಸಮಾರಂಭದ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

‘ಪಿಂಕಿ ಪೀರ್’ ಎಂಬುದಾಗಿಯೂ ಕರೆಯಲ್ಪಡುವ ಬುಶ್ರಾ ಎರಡು ವರ್ಷಗಳ ಹಿಂದೆ ಪರಿಚಯವಾದ ಬಳಿಕ, ಅವರನ್ನು 65 ವರ್ಷದ ಖಾನ್ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಆಗಾಗ ಭೇಟಿಯಾಗುತ್ತಿದ್ದರು ಎಂದು ಮಾಧ್ಯಮ ವರದಿಗಳು ಹೇಳಿವೆ.

ವಧುವಿನ ಸಹೋದರನ ಮನೆಯಲ್ಲಿ ನಡೆದ ‘ಸರಳ ಸಮಾರಂಭ’ದಲ್ಲಿ ಇಮ್ರಾನ್‌ಖಾನ್ ಮದುವೆಯಾದರು ಎಂದು ಅವರ ಪಕ್ಷದ ವಕ್ತಾರ ಫಾವದ್ ಚೌಧರಿ ತಿಳಿಸಿದರು.

ಮದುವೆಯಲ್ಲಿ ಖಾನ್‌ರ ಸಹೋದರಿಯರು ಭಾಗವಹಿಸಿಲ್ಲ.

ತನ್ನ ವಯಸ್ಸಿನ 40ರ ದಶಕದಲ್ಲಿರುವ ಬುಶ್ರಾರಿಗೆ ಈ ಹಿಂದೆ ಹಿರಿಯ ಸುಂಕ ಅಧಿಕಾರಿಯೊಬ್ಬರೊಂದಿಗೆ ಮದುವೆಯಾಗಿತ್ತು. ಕೆಲವು ತಿಂಗಳ ಹಿಂದೆ ದಂಪತಿ ವಿಚ್ಛೇದನೆ ಪಡೆದಿದ್ದಾರೆ.

ಇದಕ್ಕಿಂತ ಮೊದಲು 2 ಮದುವೆಯಾಗಿದ್ದ ಖಾನ್

ಇಮ್ರಾನ್ ಖಾನ್‌ರ ಪ್ರಥಮ ಮದುವೆ ಬ್ರಿಟನ್‌ನ ಜೆಮೀಮಾ ಖಾನ್ ಜೊತೆಗೆ 1995ರಲ್ಲಿ ನಡೆದಿತ್ತು. ದಂಪತಿಗೆ ಇಬ್ಬರು ಪುತ್ರರಾದ ಬಳಿಕ 2004ರಲ್ಲಿ ಅವರು ಬೇರ್ಪಟ್ಟರು.

ಬಳಿಕ ಅವರು ಟಿವಿ ನಿರೂಪಕಿ ರೇಹಮ್ ಖಾನ್‌ರನ್ನು 2015ರ ಜನವರಿಯಲ್ಲಿ ಎರಡನೆ ಮದುವೆಯಾದರು. ಆದರೆ, ಆ ಮದುವೆ ಹತ್ತೇ ತಿಂಗಳಲ್ಲಿ ಕೊನೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News