ವಿಮಾನ ಹೊಡೆದುರುಳಿಸಿದ ಬಳಿಕ ಇಸ್ರೇಲ್‌ನ ‘ಭದ್ರಕೋಟೆ’ ಕುಸಿದಿದೆ: ಇರಾನ್ ವಿದೇಶ ಸಚಿವ

Update: 2018-02-19 17:31 GMT

ಮ್ಯೂನಿಕ್ (ಜರ್ಮನಿ), ಫೆ. 19: ಸಿರಿಯದಲ್ಲಿರುವ ಇರಾನ್‌ನ ನೆಲೆಯೊಂದರ ಮೇಲೆ ಬಾಂಬ್ ದಾಳಿ ನಡೆಸಿದ ಇಸ್ರೇಲ್ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದು, ಅದರ ‘ತಥಾಕಥಿತ ಅಭೇದ್ಯತೆ’ಯನ್ನು ಮುರಿದಂತೆ ಆಗಿದೆ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಝರೀಫ್ ರವಿವಾರ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ಮ್ಯೂನಿಕ್ ಭದ್ರತಾ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ಇದಕ್ಕೂ ಮೊದಲು ಇದೇ ವೇದಿಕೆಯಲ್ಲಿ ಇಸ್ರೇಲ್ ಪ್ರಧಾನಿ ಇರಾನ್‌ಗೆ ನೀಡಿದ ಎಚ್ಚರಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

‘‘ಇಸ್ರೇಲ್ ತನ್ನ ನೆರೆ ದೇಶಗಳ ವಿರುದ್ಧ ಆಕ್ರಮಣವನ್ನು ತನ್ನ ನೀತಿಯಾಗಿ ಬಳಸುತ್ತಿದೆ’’ ಎಂದು ಅವರು ಆರೋಪಿಸಿದರು. ಇಸ್ರೇಲ್ ತನ್ನ ನೆರೆ ದೇಶಗಳ ವಿರುದ್ಧ ‘ಸಾಮೂಹಿಕ ಪ್ರತೀಕಾರ’ ತೆಗೆದುಕೊಳ್ಳುತ್ತದೆ ಹಾಗೂ ಸಿರಿಯ ಮತ್ತು ಲೆಬನಾನ್‌ಗಳಿಗೆ ಪ್ರತಿ ದಿನವೆಂಬಂತೆ ನುಗ್ಗುತ್ತದೆ ಎಂದರು.

‘‘ಇಸ್ರೇಲ್‌ನ ಒಂದು ಯುದ್ಧ ವಿಮಾನವನ್ನು ಹೊಡೆದುರುಳಿಸಲು ಸಿರಿಯನ್ನರಿಗೆ ಸಾಧ್ಯವಾದ ಬಳಿಕ, ಇಸ್ರೇಲ್ ಪಾಲಿಗೆ ಇದೊಂದು ವಿಕೋಪದಂತೆ ಆಗಿದೆ’’ ಎಂದು ಝರೀಫ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News