ಸಿಂಗಾಪುರ :ಅಪ್ರಾಪ್ತೆಯೊಂದಿಗೆ ಲೈಂಗಿಕ ಕ್ರಿಯೆ; 3 ಭಾರತೀಯರಿಗೆ ಜೈಲು

Update: 2018-02-21 17:27 GMT

ಸಿಂಗಾಪುರ, ಫೆ. 21: ಸಿಂಗಾಪುರದಲ್ಲಿ 2016ರಲ್ಲಿ 13 ವರ್ಷದ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ಮೂವರು ಭಾರತೀಯರಿಗೆ ವಿವಿಧ ಅವಧಿಯ ಜೈಲು ಶಿಕ್ಷೆಗಳನ್ನು ವಿಧಿಸಲಾಗಿದೆ ಎಂದು ಮಾಧ್ಯಮ ವರದಿಯೊಂದು ಬುಧವಾರ ತಿಳಿಸಿದೆ.

 25 ವರ್ಷದ ಗಿಲ್ ಗುರ್ಜಂತ್ ಸಿಂಗ್ ಮತ್ತು 29 ವರ್ಷದ ಸುರ್ಜೀತ್ ಸಿಂಗ್‌ಗೆ ತಲಾ 15 ತಿಂಗಳ ಶಿಕ್ಷೆ ವಿಧಿಸಲಾಗಿದೆ ಎಂದು ‘ದ ಸ್ಟ್ರೇಟ್ಸ್ ಟೈಮ್ಸ್’ ವರದಿ ಮಾಡಿದೆ.

33 ವರ್ಷದ ಜುಗ್ರಾಜ್ ಸಿಂಗ್‌ಗೆ ಇದೇ ಪ್ರಕರಣದಲ್ಲಿ 8 ತಿಂಗಳ ಶಿಕ್ಷೆ ವಿಧಿಸಲಾಗಿದೆ.

 14 ವರ್ಷದ ಕೆಳಗಿನ ಬಾಲಕಿಯರೊಂದಿಗೆ ಸಹಮತದ ಲೈಂಗಿಕ ಕ್ರಿಯೆ ನಡೆಸಿದರೂ ಸಿಂಗಾಪುರದಲ್ಲಿ ಅವರಿಗೆ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಈ ಮೂವರೂ ಭಾರತೀಯರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News