×
Ad

ಬಸ್‌ನಲ್ಲಿ ಸ್ಫೋಟ; 19 ಮಂದಿಗೆ ಗಾಯ

Update: 2018-02-21 23:24 IST

ಕೊಲಂಬೊ, ಫೆ. 21: ಶ್ರೀಲಂಕಾದಲ್ಲಿ ಬುಧವಾರ ಮುಂಜಾನೆ ಬಸ್ಸೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಸೇನೆ ಮತ್ತು ವಾಯುಪಡೆ ಸಿಬ್ಬಂದಿ ಸೇರಿದಂತೆ 19 ಮಂದಿ ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.

ಉತ್ತರದ ಪರ್ಯಾಯ ದ್ವೀಪ ಜಾಫ್ನಾದಿಂದ ಸೇನಾ ನೆಲೆ ಹೊಂದಿರುವ ಪಟ್ಟಣ ದಿಯತಲವಕ್ಕೆ ಪ್ರಯಾಣಿಸುತ್ತಿದ್ದಾಗ ಬೆಳಗ್ಗೆ 5:45ಕ್ಕೆ ಸ್ಫೋಟ ಸಂಭವಿಸಿತು ಎಂದು ಸೇನಾ ವಕ್ತಾರ ಬ್ರಿಗೇಡಿಯರ್ ಸುಮಿತ್ ಅಟಪಟ್ಟು ಹೇಳಿದರು.

ಏಳು ಸೇನೆ ಮತ್ತು ಐದು ವಾಯುಪಡೆ ಸಿಬ್ಬಂದಿ ಹಾಗೂ ಏಳು ನಾಗರಿಕರು ಘಟನೆಯಲ್ಲಿ ಗಾಯಗೊಂಡಿದ್ದಾರೆ.

‘‘ಸ್ಫೋಟ ಭಯೋತ್ಪಾದಕ ಕೃತ್ಯ ಆಗಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News