ನವಾಝ್ ಶರೀಫ್ ಪಕ್ಷದ ಮುಖ್ಯಸ್ಥನೂ ಆಗುವಂತಿಲ್ಲ: ಪಾಕ್ ಸುಪ್ರೀಂ ಕೋರ್ಟ್

Update: 2018-02-21 17:55 GMT

ಇಸ್ಲಾಮಾಬಾದ್, ಫೆ. 21: ಭ್ರಷ್ಟಾಚಾರ ಆರೋಪದಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡಿರುವ ನವಾಝ್ ಶರೀಫ್‌ರನ್ನು ಅವರು ಸ್ಥಾಪಿಸಿದ ರಾಜಕೀಯ ಪಕ್ಷದ ಮುಖ್ಯಸ್ಥನ ಹುದ್ದೆಯಿಂದಲೂ ಕೆಳಗಿಳಿಸಬೇಕು ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ 6 ತಿಂಗಳ ಬಳಿಕ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

ಸಾರ್ವಜನಿಕ ಹುದ್ದೆಯನ್ನು ಹೊಂದುವುದರಿಂದ ಕಾನೂನು ಪ್ರಕಾರ ಬಹಿಷ್ಕರಿಸಲ್ಪಟ್ಟಿರುವ ಹೊರತಾಗಿಯೂ, ಪಕ್ಷದ ಮುಖ್ಯಸ್ಥ ಹುದ್ದೆಯಲ್ಲಿ ಮುಂದುವರಿಯಲು ಶರೀಫ್‌ಗೆ ಅವಕಾಶ ನೀಡಿರುವ ಆಡಳಿತಾರೂಢ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ ಪಕ್ಷ ತಂದಿರುವ ತಿದ್ದುಪಡಿಯನ್ನು ನ್ಯಾಯಾಲಯದ ಈ ಆದೇಶ ರದ್ದುಪಡಿಸುತ್ತದೆ.

‘‘ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷ ಎಂಬುದಾಗಿ ದಾಖಲಾಗಿರುವ ಶರೀಫ್‌ರ ಎಲ್ಲ ಹೆಸರುಗಳನ್ನು ಎಲ್ಲ ಅಧಿಕೃತ ದಾಖಲೆಗಳಿಂದ ತೆಗೆದುಹಾಕುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಲಾಗಿದೆ’’ ಎಂದು ತೀರ್ಪು ಬರೆದಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸಾಕಿಬ್ ನಿಸಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News