×
Ad

ಜಿಮ್ನಾಸ್ಟಿಕ್ ವಿಶ್ವಕಪ್: ಕಂಚು ಜಯಿಸಿ ಇತಿಹಾಸ ಬರೆದ ಭಾರತದ ಅರುಣಾ ರೆಡ್ಡಿ

Update: 2018-02-24 19:37 IST

ಮೆಲ್ಬೋರ್ನ್, ಫೆ.24: ಇಲ್ಲಿ ನಡೆಯುತ್ತಿರುವ ಜಿಮ್ನಾಸ್ಟಿಕ್ ವಿಶ್ವಕಪ್‌ನಲ್ಲಿ ಭಾರತದ ಅರುಣಾ ಬುದ್ಧ ರೆಡ್ಡಿ ಕಂಚು ಜಯಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎಂಬ ದಾಖಲೆ ಬರೆದಿದ್ದಾರೆ.

 ಅರುಣಾ ರೆಡ್ಡಿ ಅವರು 13.649 ಅಂಕಗಳನ್ನು ಗಳಿಸಿ ಕಂಚು ತನ್ನದಾಗಿಸಿಕೊಂಡರು.ಸ್ಲೋವಾನಿಯಾದ ಅಥ್ಲೀಟ್ ಟಿಜಾಸಾ ಕಿಸ್ಲೆಫ್ ಚಿನ್ನ ಮತ್ತು ಆಸ್ಟ್ರೇಲಿಯದ ಎಮಿಲಿ ವೈಟ್‌ಹೆಡ್ ಬೆಳ್ಳಿ ಪಡೆದರು.

ಅರುಣಾ ರೆಡ್ಡಿ ಅವರ ಜೊತೆ ಅದೃಷ್ಟ ಪರೀಕ್ಷೆ ನಡೆಸಿದ್ದ ಪರಣತಿ ನಾಯಕ್ (13.416) 6ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮಾಜಿ ಬ್ಲಾಕ್ ಬೆಲ್ಟ್ ಮತ್ತು ಕರಾಟೆ ಟ್ರೈನರ್ ಆಗಿರುವ ಅರುಣಾ ರೆಡ್ಡಿ ಅವರು 2005ರಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಮೊದಲ ಬಾರಿ ಪದಕ ಜಯಿಸಿದ್ದರು.

2014ರ ಕಾಮನ್‌ವೆಲ್ತ್ ಗೇಮ್ಸ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅರುಣಾ ರೆಡ್ಡಿ ಅವರು 14ನೇ ಸ್ಥಾನ ಪಡೆದಿದ್ದರು.ಏಷ್ಯನ್ ಗೇಮ್ಸ್‌ನಲ್ಲಿ 9ನೇ ಸ್ಥಾನ ಗಳಿಸಿದ್ದರು.

2017ರ ಏಷ್ಯನ್ ಗೇಮ್ಸ್‌ನ ವಾಲ್ಟ್‌ನಲ್ಲಿ ಅರುಣಾ ರೆಡ್ಡಿ ಅವರು 6ನೇ ಸ್ಥಾನ  ಗಳಿಸಿದ್ದರು.

    ಭಾರತದ ಜಿಮ್ನಾಸ್ಟಿಕ್ ಪಟು ಆಶೀಷ್ ಕುಮಾರ್ ಅವರು 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಪಡೆದು ದಾಖಲೆ ನಿರ್ಮಿಸಿದ್ದರು. ಆರು ವರ್ಷಗಳ ಬಳಿಕ 2016ರ ರಿಯೋ ಒಲಿಂಪಿಕ್ಸ್‌ಗೆ ದೀಪಾ ಕರ್ಮಾಕರ್ ಪ್ರವೇಶ ಪಡೆಯುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡರು. ಭಾರತ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದ ಬಳಿಕ 52 ವರ್ಷಗಳಲ್ಲಿ ದೀಪಾ ಜಿಮ್ನಾಸ್ಟಿಕ್‌ನಲ್ಲಿ ಪ್ರವೇಶ ಗಿಟ್ಟಿಸಿಕೊಂಡ ಮೊದಲ ಮಹಿಳಾ ಜಿಮ್ನಾಸ್ಟಿಕ್ ಎಂಬ ಖ್ಯಾತಿಗೆ ಭಾಜನರಾಗಿದ್ದರು.

ದೀಪಾ ಕರ್ಮಾಕರ್ ಅವರಿಗೆ ಕೆಲವೇ ಅಂಕಗಳಿಂದ ಕಂಚು ತಪ್ಪಿತು. ನಾಲ್ಕನೆ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News