3ನೇ ಟ್ವೆಂಟಿ-20 : ಆಫ್ರಿಕದ ಗೆಲುವಿಗೆ 173 ರನ್ ಸವಾಲು

Update: 2018-02-25 03:34 GMT

ಕೇಪ್‌ಟೌನ್, ಫೆ.24: ದಕ್ಷಿಣ ಆಫ್ರಿಕ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 172 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಪರ ಶಿಖರ್ ಧವನ್ (47) ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು.

ಸುರೇಶ್ ರೈನಾ 43 ರನ್, ಮನೀಷ್ ಪಾಂಡೆ 13 ರನ್, ಹಾರ್ದಿಕ್ ಪಾಂಡ್ಯ21ರನ್, ಮಹೇಂದ್ರ ಸಿಂಗ್ ಧೋನಿ 12 ರನ್, ದಿನೇಶ್ ಕಾರ್ತಿಕ್ 13ರನ್, ರೋಹಿತ್ ಶರ್ಮಾ 11ರನ್, ಅಕ್ಷರ್ ಪಟೇಲ್ ಔಟಾಗದೆ 1ರನ್ ಮತ್ತು ಭುವನೇಶ್ವರ ಕುಮಾರ್ ಔಟಾಗದೆ 3 ರನ್ ಗಳಿಸಿದರು.
ದಕ್ಷಿಣ ಆಫ್ರಿಕದ ಜೂನಿಯರ್ ಡಾಲಾ 35ಕ್ಕೆ 3 ವಿಕೆಟ್, ಕ್ರಿಸ್ ಮೊರೀಸ್ 43ಕ್ಕೆ 2, ಮತ್ತು ತಬ್ರೈಝ್ ಶಂಸಿ 31ಕ್ಕೆ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News