ಖಾಲಿಸ್ತಾನ ವಿರೋಧಿ ಮಸೂದೆಯನ್ನು ಮುಂದೂಡಿದ ಪ್ರತಿಪಕ್ಷ

Update: 2018-03-02 17:34 GMT

ಟೊರಾಂಟೊ (ಕೆನಡ), ಮಾ. 2: ಪ್ರತ್ಯೇಕ ಖಾಲಿಸ್ತಾನ ರಾಜ್ಯಕ್ಕಾಗಿ ನಡೆಸಲಾಗುತ್ತಿರುವ ಭಯೋತ್ಪಾದನೆಯನ್ನು ವಿರೋಧಿಸಿ ಹಾಗು ಏಕೀಕೃತ ಭಾರತವನ್ನು ಬೆಂಬಲಿಸಿ ಕೆನಡದ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಂಡಿಸಿರುವ ಮಸೂದೆಯ ಮೇಲಿನ ಚರ್ಚೆಯನ್ನು ಪ್ರತಿಪಕ್ಷ ಕನ್ಸರ್ವೇಟಿವ್ ಪಾರ್ಟಿ ಗುರುವಾರ ಮುಂದೂಡಿದೆ.

ಈ ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳುವುದನ್ನು ವಿರೋಧಿಸಿ ಹಲವು ಸಿಖ್ ಗುಂಪುಗಳು ಆಂದೋಲನಗಳನ್ನು ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಮಸೂದೆಯನ್ನು ಪಕ್ಷದ ಸಂಸದ ಎರಿನ್ ಒ’ಟೂಲ್ ಮಂಡಿಸಿದ್ದರು. ಆದರೆ, ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳುವ ಗಂಟೆಗಳ ಮೊದಲು ಅದನ್ನು ಮುಂದೂಡಲಾಯಿತು.

ಮಸೂದೆಯು ‘ಜ್ವಲಂತ ವಿಷಯ’ವಲ್ಲದಿರುವ ಹಿನ್ನೆಲೆಯಲ್ಲಿ ಅದನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ಪಕ್ಷದ ವಕ್ತಾರ ಆ್ಯಂಡ್ರೂ ಸ್ಕೀರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News