ಸಹೋದರಿ ಸೆರೆನಾರನ್ನು ಸೋಲಿಸಿದ ವೀನಸ್ ವಿಲಿಯಮ್ಸ್

Update: 2018-03-13 18:06 GMT

ಇಂಡಿಯನ್ ವೆಲ್ಸ್, ಮಾ.13: ಸುಮಾರು 15 ತಿಂಗಳ ಬಳಿಕ ಟೆನಿಸ್ ಅಂಗಣಕ್ಕೆ ವಾಪಸಾಗಿದ್ದ ಸೆರೆನಾ ವಿಲಿಯಮ್ಸ್‌ಗೆ ಸಹೋದರಿ ವೀನಸ್ ವಿಲಿಯಮ್ಸ್ ಸೋಲಿನ ಕಹಿ ಉಣಿಸಿ ಇಂಡಿಯನ್ ವೆಲ್ಸ್ ಟೂರ್ನಿಯಿಂದ ಹೊರ ಹಾಕಿದರು.

ಸುಮಾರು 13,000 ಪ್ರೇಕ್ಷಕರ ಸಮ್ಮುಖದಲ್ಲಿ ಮಂಗಳವಾರ ನಡೆದ ಅಕ್ಕ-ತಂಗಿಯರ ನಡುವಿನ ಮೂರನೇ ಸುತ್ತಿನ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ವೀನಸ್ 6-3, 6-4 ನೇರ ಸೆಟ್‌ಗಳಿಂದ ಸೆರೆನಾರನ್ನು ಸೋಲಿಸಿದರು.

2017ರ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸೆಣಸಾಡಿದ್ದ ವಿಲಿಯಮ್ಸ್ ಸಹೋದರಿಯರು ಇದೀಗ ಮತ್ತೊಮ್ಮೆ ಮುಖಾಮುಖಿಯಾದರು.

ವೀನಸ್ ಅಂತಿಮ 16ರ ಸುತ್ತಿನಲ್ಲಿ ಅನಸ್ಟೇಸಿಜಾ ಸೆವಾಸ್ಟೋವಾರನ್ನು ಎದುರಿಸಲಿದ್ದಾರೆ. ಸೆವಾಸ್ಟೋವಾ 12ನೇ ಶ್ರೇಯಾಂಕದ ಜುಲಿಯಾ ಜಾರ್ಜಸ್‌ರನ್ನು 6-3, 6-3 ಅಂತರದಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News