ಸಿಂಧು ಸೆಮಿ ಫೈನಲ್‌ಗೆ
Update: 2018-03-16 23:35 IST
ಬರ್ಮಿಂಗ್‌ಹ್ಯಾಮ್,ಮಾ.16: ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಇಲ್ಲಿ ಶುಕ್ರವಾರ 84 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ನಾಲ್ಕನೇ ಶ್ರೇಯಾಂಕ ಸಿಂಧು ಏಳನೇ ಶ್ರೇಯಾಂಕದ ಜಪಾನ್ ಆಟಗಾರ್ತಿ ನೊರೊಮಿ ಒಕುಹರಾರನ್ನು 20-22, 21-18 ಹಾಗೂ 21-18 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.
ಸಿಂಧು ಮೊದಲ ಗೇಮ್‌ನ್ನು 20-22 ಅಂತರದಿಂದ ಸೋತಿದ್ದರು. ಆ ಬಳಿಕ ಉಳಿದೆರಡು ಗೇಮ್‌ಗಳಲ್ಲಿ ಸಿಂಧು ತೀವ್ರ ಸ್ಪರ್ಧೆ ಎದುರಿಸಿದರೂ 21-18, 21-18 ಅಂತರದಿಂದ ಜಯ ಸಾಧಿಸಿ ಅಂತಿಮ-4ರ ಘಟ್ಟ ಪ್ರವೇಶಿಸಿದ್ದಾರೆ.