ಗ್ರೀನ್ ಕಾರ್ಡ್ ಹಿಂಬಾಕಿಯನ್ನು ಸರಿಪಡಿಸಿ: ಭಾರತೀಯ ಅಮೆರಿಕನ್ನರಿಂದ ಪ್ರತಿಭಟನೆ

Update: 2018-03-20 17:01 GMT

ವಾಶಿಂಗ್ಟನ್, ಮಾ. 20: ‘ಒಂದು ದೇಶಕ್ಕೆ ಇಷ್ಟೇ’ ಎಂಬ ಮಿತಿಯನ್ನು ತೆಗೆದು ಗ್ರೀನ್ ಕಾರ್ಡ್ ನೀಡುವಲ್ಲಿನ ದೀರ್ಘಕಾಲೀನ ಹಿಂಬಾಕಿಯನ್ನು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿ ನೂರಾರು ಭಾರತೀಯ ರಾಷ್ಟ್ರೀಯರು ಅಮೆರಿಕದಾದ್ಯಂತ ಶಾಂತಿಯುತ ಸಭೆಗಳನ್ನು ನಡೆಸಿದ್ದಾರೆ.

ಎಚ್-1ಬಿ ಉದ್ಯೋಗ ವೀಸಾದ ಮೂಲಕ ಅಮೆರಿಕಕ್ಕೆ ಬಂದಿರುವ ಭಾರತೀಯ ಅಮೆರಿಕನ್ನರು ನೂತನ ವಲಸೆ ನೀತಿಯಿಂದಾಗಿ ಅತಿ ಹೆಚ್ಚಿನ ತೊಂದರೆಗೆ ಒಳಗಾದವರಾಗಿದ್ದಾರೆ. ಈಗಿನ ವಲಸೆ ನೀತಿಯು ಖಾಯಂ ಅಮೆರಿಕ ವಾಸ್ತವ್ಯಕ್ಕೆ ಅವಕಾಶ ನೀಡುವ ಗ್ರೀನ್ ಕಾರ್ಡ್‌ನ್ನು ದೇಶವೊಂದಕ್ಕೆ 7 ಶೇಕಡದಂತೆ ನಿಗದಿಪಡಿಸಿದೆ.

ಇದರಿಂದಾಗಿ, ಭಾರತೀಯ ಕೌಶಲಭರಿತ ವಲಸಿಗರು ಗ್ರೀನ್ ಕಾರ್ಡ್ ಪಡೆಯಲು 70 ವರ್ಷಗಳವರೆಗೆ ಕಾಯಬೇಕಾಗುತ್ತದೆ.

 ಭಾರತೀಯ ವಲಸಿಗರು ವಾರಾಂತ್ಯದಲ್ಲಿ ಅರ್ಕಾನ್ಸಸ್, ಕೆಂಟಕಿ ಮತ್ತು ಒರೆಗಾನ್‌ಗಳಲ್ಲಿ ಪ್ರತಿಭಟನಾ ಸಭೆಗಳನ್ನು ನಡೆಸಿದರು.

ಖಾಯಂ ವಾಸ್ತವ್ಯಕ್ಕೆ ಅವಕಾಶ ನೀಡುವ ಗ್ರೀನ್ ಕಾರ್ಡ್‌ಗಳ ವಿತರಣೆಯಲ್ಲಿ ಒಂದು ದೇಶಕ್ಕೆ 7 ಶೇಕಡದ ಮಿತಿಯನ್ನು ತೆಗೆದುಹಾಕುವಂತೆ ಪ್ರತಿಭಟನಕಾರರು ಸರಕಾರವನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News