ತೈವಾನ್‌ಗೆ ‘ಹಿಂದೆಂದೂ ಕಂಡಿರದ’ ಶಿಕ್ಷೆ: ಚೀನಾ ಅಧ್ಯಕ್ಷ ಎಚ್ಚರಿಕೆ

Update: 2018-03-20 17:17 GMT

ಬೀಜಿಂಗ್, ಮಾ. 20: ಪ್ರತ್ಯೇಕತೆಗಾಗಿ ಪ್ರಯತ್ನಿಸಿದರೆ ತೈವಾನ್ ‘ಈ ಹಿಂದೆಂದೂ ಕಂಡಿರದ’ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರ ಎಚ್ಚರಿಸಿದ್ದಾರೆ.

ಸ್ವಆಡಳಿತ ಹೊಂದಿರುವ ತೈವಾನ್ ಚೀನಾದ ಅತ್ಯಂತ ಸೂಕ್ಷ್ಮ ವಿಷಯಗಳ ಪೈಕಿ ಒಂದಾಗಿದೆ.

2016ರಲ್ಲಿ ತೈವಾನ್ ಅಧ್ಯಕ್ಷೆಯಾಗಿ ಪ್ರಜಾಪ್ರಭುತ್ವದ ಪರವಾಗಿರುವ ‘ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ’ಯ ತ್ಸಾಯಿ ಇಂಗ್ ವೆನ್ ಆಯ್ಕೆಯಾದಂದಿನಿಂದ ತೈವಾನ್ ಜೊತೆಗಿನ ಚೀನಾದ ಸಂಘರ್ಷ ಹೆಚ್ಚಿದೆ.

 ಚೀನಾದ ವಾರ್ಷಿಕ ಸಂಸದ್ ಅಧಿವೇಶನದ ಕೊನೆಯಲ್ಲಿ ಭಾಷಣ ಮಾಡಿದ ಕ್ಸಿ, ಚೀನಾವು ‘ತಾಯ್ನಾಡಿನ ಶಾಂತಿಯುತ ಏಕೀಕರಣಕ್ಕಾಗಿ’ ಶ್ರಮಿಸುತ್ತದೆ ಹಾಗೂ ಚೀನಾದ ಅಭಿವೃದ್ಧಿಯ ಲಾಭ ಹೆಚ್ಚಿನ ತೈವಾನಿಗರಿಗೆ ಸಿಗುವಂತೆ ಮಾಡುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News