ವಾರ್ನರ್‌ಗೆ ತಿರುಗಿಬಿದ್ದ ಸಹ ಆಟಗಾರರು: ಟೀಮ್ ಹೊಟೇಲ್‌ನಿಂದ ಹೊರಹಾಕಲು ಆಗ್ರಹ

Update: 2018-03-27 13:12 GMT

ಕೇಪ್‌ಟೌನ್, ಮಾ.27: ಮೂರನೇ ಟೆಸ್ಟ್‌ನಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಉಪ ನಾಯಕನ ಸ್ಥಾನ ಕಳೆದುಕೊಂಡಿರುವ ಡೇವಿಡ್ ವಾರ್ನರ್ ಇದೀಗ ಸ್ವತಃ ಮತ್ತೊಂದು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಸಹ ಆಟಗಾರರ ಕೋಪಕ್ಕೆ ಗುರಿಯಾಗಿರುವ ವಾರ್ನರ್ ಟೀಮ್ ಹೊಟೇಲ್‌ನಲ್ಲಿ ತನ್ನ ಇತರ ಸ್ನೇಹಿತರೊಂದಿಗೆ ಪಾರ್ಟಿ ನಡೆಸಿದ್ದಾರೆ. ನಾಯಕ ಸ್ಟೀವ್ ಸ್ಮಿತ್ ಚೆಂಡು ವಿರೂಪ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಸದಸ್ಯರು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾರೆ. ಇದೀಗ ಆರಂಭಿಕ ಆಟಗಾರ ವಾರ್ನರ್ ವರ್ತನೆಯ ಬಗ್ಗೆ ಕೋಪಗೊಂಡಿದ್ದಾರೆ. ವಾರ್ನರ್‌ರನ್ನು ಟೀಮ್ ಹೊಟೇಲ್‌ನಿಂದ ಹೊರ ಹಾಕುವಂತೆಯೂ ಆಟಗಾರರು ಸಂಬಂಧಿಸಿದ ಅಧಿಕಾರಿಗಳಿಗೆ ವಿನಂತಿಸಿದ್ದಾರೆ. ವಾರ್ನರ್ ತಮ್ಮೊಂದಿಗಿದ್ದರೆ ಮತ್ತೊಂದು ಕಹಿ ಘಟನೆ ನಡೆಯಬಹುದೆಂಬ ಭೀತಿಯಲ್ಲಿ ಆಟಗಾರರಿದ್ದಾರೆ ಎಂದು ‘ಫೋಕ್ಸ್ ಸ್ಪೋರ್ಟ್ಸ್’ ವರದಿ ಮಾಡಿದೆ.

 ಚೆಂಡು ವಿರೂಪ ಪ್ರಕರಣ ನಡೆದ ಬಳಿಕ ವಾರ್ನರ್ ದುಷ್ಟನಂತೆ ವರ್ತಿಸುತ್ತಿದ್ದು, ಸಹ ಆಟಗಾರರ ವ್ಯಾಟ್ಸ್‌ಆ್ಯಪ್ ಗ್ರೂಪ್‌ನಿಂದ ವಾರ್ನರ್‌ರನ್ನು ಹೊರಗಿಡಲಾಗಿದೆ. ತಂಡದ ಹೆಚ್ಚಿನ ಕ್ರಿಕೆಟಿಗರು ವಾರ್ನರ್‌ರೊಂದಿಗೆ ಮತ್ತೊಮ್ಮೆ ಆಡಲು ಇಷ್ಟಪಡುತ್ತಿಲ್ಲ ಎಂದು ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News