ಗೆಳೆಯರು ತನ್ನನ್ನು ವಾಟ್ಸ್ಯಾಪ್ ಗ್ರೂಪ್ ಗೆ ಸೇರಿಸದ್ದಕ್ಕೆ ಬೇಸರ: ಬಾಲಕಿ ಆತ್ಮಹತ್ಯೆ
Update: 2018-03-30 23:44 IST
ಲಂಡನ್, ಮಾ. 30: ಸಹಪಾಠಿಗಳು ವಾಟ್ಸ್‌ಆ್ಯಪ್ ಗ್ರೂಪೊಂದರಲ್ಲಿ ತನ್ನನ್ನು ಸೇರಿಸಿಕೊಳ್ಳದಿರುವುದರಿಂದ ಅನಾಥ ಪ್ರಜ್ಞೆ ಅನುಭವಿಸಿದ ಭಾರತ ಮೂಲದ ಹದಿ ಹರೆಯದ ಬಾಲಕಿ ಬ್ರಿಟನ್‌ನ ಉನ್ನತ ಗ್ರಾಮರ್ ಶಾಲೆಯೊಂದರ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆಯ ಬಗ್ಗೆ ಈ ವಾರ ನಡೆದ ವಿಚಾರಣೆಯಲ್ಲಿ ಈ ಅಂಶ ಬಯಲಾಗಿದೆ.
ಲಂಡನ್‌ನಲ್ಲಿರುವ ಹೆನ್ರಿಯೆಟ ಬ್ಯಾರ್ನೆಟ್ ಶಾಲೆಯಲ್ಲಿ 14 ವರ್ಷದ ಎಲೀನಾ ಮೊಂಡಲ್ ನೇಣು ಬಿಗಿದ ಸ್ಥಿತಿಯಲ್ಲಿದ್ದುದನ್ನು ಶಿಕ್ಷಕರು ಪತ್ತೆಹಚ್ಚಿದ್ದರು.
ಸ್ನೇಹಿತರು ಆಕೆಯನ್ನು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸೇರಿಸದಿರುವುದರಿಂದ ಹುಡುಗಿಯಲ್ಲಿ ಪರಕೀಯ ಭಾವನೆ ಬೆಳೆದಿರಬಹುದು ಎಂಬುದಾಗಿ ಮನಃಶಾಸ್ತ್ರಜ್ಞೆ ಎಮಿಲಿ ಹ್ಯಾಲ್‌ಗಾರ್ಟನ್, ಬ್ಯಾರ್ನೆಟ್ ಕೊರೋನರ್ ನ್ಯಾಯಾಲಯಕ್ಕೆ ತಿಳಿಸಿದರು.