ಸೋಮವಾರ ಮಧ್ಯಾಹ್ನ ಭೂಮಿಗೆ ಅಪ್ಪಳಿಸಲಿದೆ ಚೀನಾ ಪ್ರಯೋಗಾಲಯ!

Update: 2018-04-01 16:38 GMT
ಸಾಂದರ್ಭಿಕ ಚಿತ್ರ

ಬೀಜಿಂಗ್, ಎ. 1: ನಿಯಂತ್ರಣ ತಪ್ಪಿರುವ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಈ ಹಿಂದೆ ನಿರೀಕ್ಷಿಸಿರುವುದಕ್ಕಿಂತ ತಡವಾಗಿ ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಹೇಳುವಂತೆ, ಪ್ರಯೋಗಾಲಯವು ಭಾರತೀಯ ಕಾಲಮಾನ ಸೋಮವಾರ ಮಧ್ಯಾಹ್ನದ ವೇಳೆಗೆ ಭೂಮಿಯ ವಾತಾವರಣವನ್ನು ಪ್ರವೇಶಿಸಲಿದೆ.

 ಪ್ರಯೋಗಾಲಯದ ಚಲನೆಯ ಮೇಲೆ ನಿಗಾ ಇಟ್ಟಿರುವ ಐರೋಪ್ಯ ಬಾಹ್ಯಾಕಾಶ ಸಂಸ್ಥೆ, ಅದು ಭಾರತೀಯ ಕಾಲಮಾನ ಶನಿವಾರ ಸಂಜೆ ಮತ್ತು ರವಿವಾರ ಬೆಳಗ್ಗಿನ ನಡುವಿನ ಅವಧಿಯಲ್ಲಿ ಭೂಮಿಯನ್ನು ತಲುಪಬಹುದು ಎಂದು ಹೇಳಿತ್ತು.

ಅದೇ ವೇಳೆ, ಸುಮಾರು 8 ಟನ್ (8,000 ಕೆಜಿ) ಭಾರದ ‘ಟಿಯಾಂಗಾಂಗ್-1’ ಭೂಮಿಗೆ ಬೀಳುವಾಗ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ ಎಂಬುದಾಗಿ ಚೀನಾದ ಅಧಿಕಾರಿಗಳು ಹೇಳಿದ್ದಾರೆ. ಅದೂ ಅಲ್ಲದೆ, ಭೂಮಿಯ ವಾತಾವರಣವನ್ನು ಬಾಹ್ಯಾಕಾಶ ಪ್ರಯೋಗಾಲಯ ಪ್ರವೇಶಿಸುವಾಗ ಛಿದ್ರವಿಚ್ಛಿದ್ರಗೊಳ್ಳಲಿದ್ದು, ಉಲ್ಕಾವರ್ಷದ ಅನುಭವವನ್ನು ನೀಡಲಿದೆ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News