ಅಮೆರಿಕಕ್ಕೆ ಬಾಲ್ಯದಲ್ಲಿ ವಲಸೆ ಬಂದವರಿಗೆ ಇನ್ನು ರಕ್ಷಣೆಯಿಲ್ಲ: ಟ್ರಂಪ್
ವಾಶಿಂಗ್ಟನ್, ಎ. 2: ಚಿಕ್ಕಂದಿನಲ್ಲಿ ತಮ್ಮ ಹೆತ್ತವರೊಂದಿಗೆ ಅಕ್ರಮವಾಗಿ ಅಮೆರಿಕಕ್ಕೆ ಬಂದು ನೆಲೆಸಿರುವ ವಿದೇಶೀಯರಿಗೆ ಪೌರತ್ವ ನೀಡುವ ಪ್ರಸ್ತಾಪವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಟ್ವಿಟರ್‌ನಲ್ಲಿ ಹೇಳಿದ್ದಾರೆ.
‘‘ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಗಡಿ ಕಾವಲುಗಾರರಿಗೆ ಹಾಸ್ಯಾಸ್ಪದ (ಹಿಂದಿನ ಒಬಾಮ ಸರಕಾರದ) ಕಾನೂನುಗಳು ಅವಕಾಶ ನೀಡುತ್ತಿಲ್ಲ. ಗಡಿ ಹೆಚ್ಚು ಅಪಾಯಕಾರಿಯಾಗುತ್ತಿದೆ. ಸಾಲು ಸಾಲು ವಾಹನಗಳೇ ಬರುತ್ತಿವೆ. ಈಗ ಕಠಿಣ ಕಾನೂನು ತರಲು ರಿಪಬ್ಲಿಕನ್ನರು (ಈಗಿನ ಸರಕಾರ) ಕಠಿಣ ಪರಿಶ್ರಮ ಪಡಬೇಕಿದೆ. ಇನ್ನು ‘ಡಾಕಾ’ (ಚಿಕ್ಕಂದಿನಲ್ಲಿ ಅಮೆರಿಕಕ್ಕೆ ಬಂದವರನ್ನು ಗಡಿಪಾರು ಮಾಡದಂತೆ ತಡೆಯುವ ಕಾಯ್ದೆ) ಕೂಡ ಇರುವುದಿಲ್ಲ’’ ಎಂಬುದಾಗಿ ಟ್ರಂಪ್ ರವಿವಾರ ಟ್ವೀಟ್ ಮಾಡಿದ್ದಾರೆ.
ಬಾಲ್ಯದಲ್ಲಿ ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಬಂದವರನ್ನು ಗಡಿಪಾರಿನಿಂದ ರಕ್ಷಿಸು ‘ಡಾಕಾ’ ಕಾನೂನನ್ನು 2012ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮ ರೂಪಿಸಿದ್ದರು.