ಮಂಗಳಯಾನಕ್ಕೆ ಅಗತ್ಯವಾದ ಪ್ಯಾರಾಶೂಟ್‌ನ ಯಶಸ್ವಿ ಉಡ್ಡಯನ ಪರೀಕ್ಷೆ
ವಾಶಿಂಗ್ಟನ್, ಎ. 2: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಶೋಧ ನೌಕೆಗಳು ಮಂಗಳ ಗ್ರಹದ ಮೇಲೆ ಇಳಿಯಲು ಸಹಾಯ ಮಾಡುವ ಸೂಪರ್‌ಸಾನಿಕ್ ಪ್ಯಾರಾಶೂಟೊಂದನ್ನು ರವಿವಾರ ಯಶಸ್ವಿಯಾಗಿ ಗಗನಕ್ಕೆ ಹಾರಿಬಿಡಲಾಗಿದೆ.
ಕೆಂಪು ಗ್ರಹವನ್ನು ಪ್ರವೇಶಿಸುವಾಗ ಎದುರಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುವ ರೀತಿಯಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು.
‘ಅಡ್ವಾನ್ಸ್‌ಡ್ ಸೂಪರ್‌ಸಾನಿಕ್ ಪ್ಯಾರಾಶೂಟ್ ಇನ್‌ಫ್ಲೇಶನ್ ರಿಸರ್ಚ್ ಎಕ್ಸ್‌ಪರಿಮೆಂಟ್ (ಎಎಸ್‌ಪಿಐಆರ್‌ಇ)’ನ್ನು ರಾಕೆಟೊಂದರಲ್ಲಿ ನಾಸಾದ ವಾಲೋಪ್ಸ್ ಹಾರಾಟ ಕೇಂದ್ರದಿಂದ ಮಾರ್ಚ್ 31ರಂದು ಉಡಾಯಿಸಲಾಗಿತು.
ಅಟ್ಲಾಂಟಿಕ್ ಸಮುದ್ರದಲ್ಲಿ ಪ್ಯಾರಾಶೂಟನ್ನು ಮರಳಿ ಪಡೆಯುವ ವಲಯ ಪ್ರಕ್ಷುಬ್ಧವಾಗಿದ್ದ ಹಿನ್ನೆಲೆಯಲ್ಲಿ ಉಡಾವಣೆಯನ್ನು ಹಲವು ದಿನಗಳ ಕಾಲ ಮುಂದೂಡಲಾಗಿತ್ತು.
ಬಾಹ್ಯಾಕಾಶ ನೌಕೆಯೊಂದು ಮಂಗಳ ಗ್ರಹವನ್ನು ಪ್ರವೇಶಿಸುವಾಗ, ಅದರ ವಾತಾವರಣದಲ್ಲಿ ಇಳಿಯುವಾಗ ಮತ್ತು ನೆಲವನ್ನು ಸ್ಪರ್ಶಿಸುವಾಗ ಎದುರಿಸುವ ಪರಿಸ್ಥಿತಿಗಳನ್ನು ನಿರ್ಮಿಸುವುದಕ್ಕಾಗಿ ಪರೀಕ್ಷೆಯನ್ನು ನಡೆಸಲಾಗಿತ್ತು.
ಇಲ್ಲಿ ಪಡೆದ ಮಾಹಿತಿಗಳ ಆಧಾರದಲ್ಲಿ ಸಂಶೋಧಕರು ಪ್ಯಾರಾಶೂಟನ್ನು ವಿನ್ಯಾಸಗೊಳಿಸಲಿದ್ದಾರೆ. 2020ರಲ್ಲಿ ಮಂಗಳ ಗ್ರಹಕ್ಕೆ ಹಾರಿಬಿಡಲಾಗುವ ಶೋಧಕ ನೌಕೆಗಾಗಿ ಈ ತಯಾರಿ ನಡೆದಿದೆ.