ಕಾರ್ಲೋಸ್ ಆ್ಯಲ್ವರಡೊ ಕೋಸ್ಟರಿಕದ ಮುಂದಿನ ಅಧ್ಯಕ್ಷ
Update: 2018-04-02 23:23 IST
ಸ್ಯಾನ್‌ಜೋಸ್ (ಕೋಸ್ಟರಿಕ), ಎ. 2: ಕೋಸ್ಟರಿಕದ ಆಡಳಿತಾರೂಢ ಪಕ್ಷದ ಕಾರ್ಲೋಸ್ ಆ್ಯಲ್ವರಡೊ ರವಿವಾರ ನಡೆದ ಚುನಾವಣೆಯಲ್ಲಿ ಜಯ ಗಳಿಸಿದ್ದು ಮುಂದಿನ ಅಧ್ಯಕ್ಷರಾಗಲಿದ್ದಾರೆ.
38 ವರ್ಷದ ಮಾಜಿ ಕಾರ್ಮಿಕ ಸಚಿವ ಆ್ಯಲ್ವರಡೊ 60.66 ಶೇಕಡ ಮತಗಳನ್ನು ಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಫ್ಯಾಬ್ರಿಶಿಯೊ ಆ್ಯಲ್ವರಡೊ (ಇಬ್ಬರ ನಡುವೆ ಯಾವುದೇ ಸಂಬಂಧವಿಲ್ಲ) 39.33 ಶೇಕಡ ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.