ಮಲೇಶ್ಯ: ‘ಸುಳ್ಳು ಸುದ್ದಿ’ ಮಸೂದೆ ಅಂಗೀಕಾರ

Update: 2018-04-02 17:55 GMT

ಕೌಲಾಲಂಪುರ (ಮಲೇಶ್ಯ), ಎ. 2: ‘ಸುಳ್ಳು ಸುದ್ದಿ’ ಪ್ರಸಾರಕ್ಕೆ 6 ವರ್ಷ ಜೈಲು ಶಿಕ್ಷೆ ನೀಡುವ ವಿವಾದಾಸ್ಪದ ಮಸೂದೆಯನ್ನು ಮಲೇಶ್ಯ ಸಂಸತ್ತು ಸೋಮವಾರ ಅಂಗೀಕರಿಸಿದೆ.

ಈ ಕ್ರಮವು ಚುನಾವಣೆಯ ಮುನ್ನ ಭಿನ್ನಮತವನ್ನು ಹತ್ತಿಕ್ಕುವ ತಂತ್ರ ಎಂಬ ಟೀಕೆ ಸಾರ್ವತ್ರಿಕವಾಗಿ ಕೇಳಿ ಬಂದಿದೆ.

ಇದು ಪ್ರಧಾನಿ ನಜೀಬ್ ರಝಾಕ್ ಸರಕಾರ ಶಾಮೀಲಾಗಿದೆಯೆನ್ನಲಾದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದ ಟೀಕೆಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News