×
Ad

ಬೊಕೊ ಹರಮ್ ಉಗ್ರರಿಂದ ಸೇನಾ ನೆಲೆ ಮೇಲೆ ದಾಳಿ: ಕನಿಷ್ಠ 20 ಸಾವು

Update: 2018-04-03 21:38 IST

ಕನೊ (ನೈಜೀರಿಯ), ಎ. 3: ಉತ್ತರ ನೈಜೀರಿಯದ ಮೈದುಗುರಿ ನಗರದಲ್ಲಿನ ಸೇನಾ ಶಿಬಿರ ಮತ್ತು ಗ್ರಾಮಗಳ ಮೇಲೆ ಸಂಘಟಿತ ದಾಳಿ ಮಾಡಿದ ಬೊಕೊ ಹರಮ್ ಭಯೋತ್ಪಾದಕರು ಕನಿಷ್ಠ 20 ಮಂದಿಯನ್ನು ಕೊಂದಿದ್ದಾರೆ ಹಾಗೂ ಹಲವಾರು ಮಂದಿಯನ್ನು ಗಾಯಗೊಳಿಸಿದ್ದಾರೆ.

ನಗರದ ದ್ವಾರದಲ್ಲಿರುವ ಸೇನಾ ನೆಲೆಯ ಮೇಲೆ ಭಯೋತ್ಪಾದಕರು ಆತ್ಮಹತ್ಯಾ ಬಾಂಬರ್‌ಗಳು, ಮೋರ್ಟರ್‌ಗಳು ಮತ್ತು ಬಂದೂಕುಗಳ ಮೂಲಕ ದಾಳಿ ನಡೆಸಿದರು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.

  ‘‘18 ಬೊಕೊ ಹರಮ್ ಭಯೋತ್ಪಾದಕರು ನಡೆದುಕೊಂಡು ಸೇನಾ ನೆಲೆಗೆ ಬಂದರು. ಇನ್ನೊಂದು ಕಡೆ 7 ಆತ್ಮಹತ್ಯಾ ಬಾಂಬರ್‌ಗಳು ಸಮೀಪದ ಬಲೆ ಶುವರ್ ಮತ್ತು ಅಲಿಕರಂಟಿ ಗ್ರಾಮಗಳ ಮೇಲೆ ದಾಳಿ ನಡೆಸಿದರು’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News