56 ರೊಹಿಂಗ್ಯಾರನ್ನು ಹೊತ್ತ ದೋಣಿ ಮಲೇಶ್ಯ ನೌಕಾಪಡೆ ವಶಕ್ಕೆ

Update: 2018-04-03 17:22 GMT

 ಕೌಲಾಲಂಪುರ, ಎ. 3: ಮ್ಯಾನ್ಮಾರ್‌ನಿಂದ ಪಲಾಯನಗೈದಿರುವ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರು ಎನ್ನಲಾದ 56 ಮಂದಿಯನ್ನು ಹೊತ್ತ ದೋಣಿಯೊಂದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಲೇಶ್ಯ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ಅಹ್ಮದ್ ಕಮರುಲ್ಝಮನ್ ಅಹ್ಮದ್ ಬದ್ರುದ್ದೀನ್ ಮಂಗಳವಾರ ಹೇಳಿದ್ದಾರೆ.

ದೋಣಿಯು ಮಲೇಶ್ಯ ಜಲಪ್ರದೇಶವನ್ನು ಪ್ರವೇಶಿಸಿದ ಬಳಿಕ ಅದನ್ನು ತಡೆಯಲಾಯಿತು ಹಾಗೂ ಈಗ ಅದು ರಿಸಾರ್ಟ್ ದ್ವೀಪ ಲಂಗ್‌ಕವಿಯಲ್ಲಿದೆ ಎಂದು ಅವರು ತಿಳಿಸಿದರು.

ದೋಣಿಯಲ್ಲಿದ್ದ ಎಲ್ಲ 56 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಹೇಳಿದ ಅವರು, ಆದರೆ, ಅವರು ದಣಿದಿದ್ದಾರೆ ಮತ್ತು ಹಸಿದಿದ್ದಾರೆ ಹಾಗೂ ಅವರಿಗೆ ಆಹಾರ ಮತ್ತು ನೀರು ನೀಡಲಾಗಿದೆ ಎಂದರು.

ದೋಣಿ ಮತ್ತು ಅದರ ಪ್ರಯಾಣಿಕರನ್ನು ವಲಸೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ನೌಕಾಪಡೆ ಮುಖ್ಯಸ್ಥರು ತಿಳಿಸಿದರು.

ಮ್ಯಾನ್ಮಾರ್ ಸೇನೆಯ ಅಮಾನುಷ ದೌರ್ಜನ್ಯಕ್ಕೆ ಬೆದರಿ ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News