×
Ad

ಸಿರಿಯ: ಸ್ವಲ್ಪ ಸಮಯ ಸೇನೆ ಮುಂದುವರಿಸಲು ಟ್ರಂಪ್ ಒಪ್ಪಿಗೆ

Update: 2018-04-06 23:44 IST

ವಾಶಿಂಗ್ಟನ್, ಎ. 6: ಸಿರಿಯದಲ್ಲಿ ಐಸಿಸ್‌ನ್ನು ಸೋಲಿಸುವುದಕ್ಕಾಗಿ ಆ ದೇಶದಲ್ಲಿ ಅಮೆರಿಕ ಸೇನೆಯನ್ನು ಸ್ವಲ್ಪ ಹೆಚ್ಚು ಸಮಯ ಇರಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಾರ ನಡೆದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಅಮೆರಿಕದ ಸೈನಿಕರು ಶೀಘ್ರವೇ ಮರಳಬೇಕು ಎಂಬುದಾಗಿ ಬಯಸಿದ್ದಾರೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಿರ್ದಿಷ್ಟ ವಾಪಸಾತಿ ವೇಳಾಪಟ್ಟಿಯನ್ನು ಸಭೆಯಲ್ಲಿ ಟ್ರಂಪ್ ಅನುಮೋದಿಸಲಿಲ್ಲ ಎಂದು ಅಧಿಕಾರಿ ತಿಳಿಸಿದರು.

ಸಿರಿಯದಲ್ಲಿರುವ ಐಸಿಸ್ ಉಗ್ರರನ್ನು ಸೋಲಿಸಬೇಕು ಎಂದು ಟ್ರಂಪ್ ಬಯಸಿದ್ದಾರೆ, ಆದರೆ, ವಲಯದಲ್ಲಿರುವ ಇತರ ದೇಶಗಳು ಮತ್ತು ವಿಶ್ವಸಂಸ್ಥೆ ಮುಂದೆ ಬಂದು ಆ ದೇಶದಲ್ಲಿ ಸ್ಥಿರತೆ ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಅವರು ಬಯಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News