ಐರೋಪ್ಯ ಒಕ್ಕೂಟದ 27 ಲಕ್ಷ ಜನರ ಮಾಹಿತಿ ಹಂಚಿಕೆ: ಫೇಸ್‌ಬುಕ್
Update: 2018-04-06 23:50 IST
ಬ್ರಸೆಲ್ಸ್, ಎ. 6: ಐರೋಪ್ಯ ಒಕ್ಕೂಟದ ಸುಮಾರು 27 ಲಕ್ಷ ಜನರ ವೈಯಕ್ತಿಕ ಮಾಹಿತಿಯನ್ನು ‘ಅನುಚಿತವಾಗಿ ಹೊರಗೆ ನೀಡಿರುವ’ ಸಾಧ್ಯತೆಯಿದೆ ಎಂಬುದನ್ನು ಫೇಸ್‌ಬುಕ್ ಒಪ್ಪಿಕೊಂಡಿದೆ ಎಂದು ಒಕ್ಕೂಟ ಶುಕ್ರವಾರ ಪ್ರಕಟಿಸಿದೆ. ಇನ್ನೂ ಹೆಚ್ಚಿನ ಉತ್ತರಗಳನ್ನು ತಾನು ಫೇಸ್‌ಬುಕ್‌ನಿಂದ ಬಯಸುತ್ತಿರುವುದಾಗಿ ಅದು ಹೇಳಿದೆ.
ಮಾಹಿತಿ ಹಂಚಿಕೆ ಹಗರಣದಲ್ಲಿ ಎಷ್ಟು ಯುರೋಪಿಯನ್ನರು ಸಂತ್ರಸ್ತರಾಗಿದ್ದಾರೆ ಎಂದು ಪ್ರಶ್ನಿಸಿ ಒಕ್ಕೂಟ ಕಳೆದ ವಾರ ಫೇಸ್‌ಬುಕ್‌ಗೆ ಪತ್ರ ಬರೆದಿತ್ತು.
ಬ್ರಿಟನ್‌ನ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಜ್ ಅನಲಿಟಿಕಾಕ್ಕೆ ಫೇಸ್‌ಬುಕ್ ಮಾಹಿತಿ ಹಂಚಿಕೆ ಮಾಡಿರುವ ಹಗರಣ ಕಳೆದ ವಾರ ಬಯಲಿಗೆ ಬಂದ ಬಳಿಕ ಈ ಬೆಳವಣಿಗೆಗಳು ಸಂಭವಿಸಿವೆ.