ಜರ್ಮನಿ: ಗುಂಪಿನ ಮೇಲೆ ನುಗ್ಗಿದ ಕಾರು; ಹಲವರು ಮೃತಪಟ್ಟಿರುವ ಶಂಕೆ
Update: 2018-04-07 21:15 IST
ಜರ್ಮನಿ, ಎ.7: ಗುಂಪೊಂದರ ಮೇಲೆ ಕಾರೊಂದು ನುಗ್ಗಿದ್ದು, ಹಲವರು ಮೃತಪಟ್ಟಿರುವ ಘಟನೆ ಪಶ್ಚಿಮ ಜರ್ಮನಿಯ ಮ್ಯೂನ್ ಸ್ಟೆರ್ ನಲ್ಲಿ ನಡೆದಿದೆ.
“ಆರೋಪಿಯೂ ಸೇರಿದಂತೆ ಹಲವರು ಮೃತಪಟ್ಟಿದ್ದಾರೆ” ಎಂದು ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದಾರೆ. ಕೂಡಲೇ ಜನರು ಸ್ಥಳದಿಂದ ಬೇರೆಡೆಗೆ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ.
ಘಟನೆಯಿಂದ ಸುಮಾರು 30 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಪಘಾತದ ನಂತರ ಚಾಲಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.