ಐಸ್ ಹಾಕಿ ತಂಡದ ಬಸ್ ಅಪಘಾತ; 14 ಸಾವು
Update: 2018-04-07 22:35 IST
ಒಟ್ಟಾವ (ಕೆನಡ), ಎ. 7: ಪಶ್ಚಿಮ ಕೆನಡದ ಸ್ಯಾಸ್ಕಟ್‌ಚೆವನ್ ರಾಜ್ಯದ ಹೆದ್ದಾರಿಯೊಂದರಲ್ಲಿ, ಶುಕ್ರವಾರ ಜೂನಿಯರ್ ಐಸ್ ಹಾಕಿ ತಂಡವೊಂದನ್ನು ಒಯ್ಯುತ್ತಿದ್ದ ಬಸ್ಸೊಂದು ಟ್ರಕ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಹಾಗೂ 14 ಮಂದಿ ಗಾಯಗೊಂಡಿದ್ದಾರೆ.
ಬಸ್‌ನಲ್ಲಿ ಚಾಲಕ ಸೇರಿದಂತೆ 28 ಮಂದಿ ಪ್ರಯಾಣಿಸುತ್ತಿದ್ದರು.
‘ಹಮ್‌ಬೋಲ್ಟ್ ಬಾಂಕಾಸ್’ ತಂಡದ ಆಟಗಾರರು ತಂಡದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ‘ಸ್ಯಾಸ್ಕಟೂನ್ ಸ್ಟಾರ್‌ಫೀನಿಕ್ಸ್’ ವರದಿ ಮಾಡಿದೆ.
ಸ್ಯಾಸ್ಕಟ್‌ಚೆವನ್ ಜೂನಿಯರ್ ಹಾಕಿ ಲೀಗ್‌ನಲ್ಲಿ ಭಾಗವಹಿಸುವುದಕ್ಕಾಗಿ ತಂಡ ಪ್ರಯಾಣಿಸುತ್ತಿತ್ತು.