×
Ad

ಪಪುವ ನ್ಯೂಗಿನಿಯಲ್ಲಿ ಮತ್ತೆ ಪ್ರಬಲ ಭೂಕಂಪ

Update: 2018-04-07 22:43 IST

ಸಿಡ್ನಿ, ಎ. 7: ಪಪುವ ನ್ಯೂಗಿನಿಯಲ್ಲಿ ಶನಿವಾರ ರಿಕ್ಟರ್ ಮಾಪಕದಲ್ಲಿ 6.3ರ ತೀವ್ರತೆಯ ಶಕ್ತಿಶಾಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೆ (ಯುಎಸ್‌ಜಿಎಸ್) ಹೇಳಿದೆ.

ಎರಡು ತಿಂಗಳ ಹಿಂದೆ ಈ ವಲಯದಲ್ಲಿ ಸಂಭವಿಸಿದ 7.5ರ ತೀವ್ರತೆಯ ಅತ್ಯಂತ ಪ್ರಬಲ ಭೂಕಂಪದ ಪರಿಣಾಮಗಳಿಂದ ಹೊರಬರಲು ದೇಶ ಪರದಾಡುತ್ತಿರುವ ಸಂದರ್ಭದಲ್ಲೇ ಹೊಸ ಆಘಾತ ಎದುರಾಗಿದೆ.

ಭೂಕಂಪದಿಂದಾಗಿ ಸಾವು-ನೋವುಗಳಾಗಿರುವ ಬಗ್ಗೆ ತಕ್ಷಣಕ್ಕೆ ವರದಿಗಳು ಬಂದಿಲ್ಲ. ಎರಡು ತಿಂಗಳ ಹಿಂದೆ ನಡೆದ ಭೂಕಂಪದಲ್ಲಿ ಕನಿಷ್ಠ 125 ಮಂದಿ ಮೃತಪಟ್ಟಿದ್ದಾರೆ ಹಾಗೂ ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News