ಬಂಡುಕೋರರ ಕ್ಷಿಪಣಿಯನ್ನು ಹೊಡೆದುರುಳಿಸಿದ ಸೌದಿ
Update: 2018-04-07 23:30 IST
ಜಿದ್ದಾ, ಎ. 7: ಯಮನ್‌ನ ಹೌದಿ ಬಂಡುಕೋರರು ನಜ್ರಾನ್‌ನತ್ತ ಉಡಾಯಿಸಿದ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ಸೌದಿ ಅರೇಬಿಯದ ವಾಯು ರಕ್ಷಣಾ ಪಡೆಗಳು ತುಂಡರಿಸಿವೆ ಎಂದು ಸೌದಿ ಅರೇಬಿಯ ನೇತೃತ್ವದ ಮೈತ್ರಿಕೂಟ ಶನಿವಾರ ಇಳಿಸಿದೆ.
ಯಮನ್‌ನ ಸಾಡದಿಂದ ಸೌದಿ ಅರೇಬಿಯದ ದಕ್ಷಿಣದ ನಗರ ನಜ್ರಾನ್‌ನತ್ತ ಕ್ಷಿಪಣಿಯೊಂದು ಹಾರುತ್ತಿರುವುದನ್ನು ಶುಕ್ರವಾರ ರಾತ್ರಿ 9:32ರ ಹೊತ್ತಿಗೆ ಮೈತ್ರಿಪಡೆಯ ವಾಯು ರಕ್ಷಣಾ ಘಟಕವು ಗಮನಿಸಿತು ಹೇಳಿಕೆಯೊಂದರಲ್ಲಿ ಮೈತ್ರಿಕೂಟದ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ಹೇಳಿದ್ದಾರೆ.
ಬಳಿಕ, ಅದನ್ನು ಸೌದಿ ಅರೇಬಿಯದ ಪ್ಯಾಟ್ರಿಯಟ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಮೂಲಕ ಹೊಡೆದುರುಳಿಸಲಾಯಿತು. ಅದರ ಭಾಗಗಳು ಜನವಸತಿ ಪ್ರದೇಶದಲ್ಲಿ ಹರಡಿವೆ ಎಂದರು.