ಭದ್ರತಾ ಮಂಡಳಿ ಅಧ್ಯಕ್ಷರೊಂದಿಗೆ ಕಾಶ್ಮೀರ ವಿವಾದ ಪ್ರಸ್ತಾಪಿಸಿದ ಪಾಕ್

Update: 2018-04-07 18:01 GMT

ವಿಶ್ವಸಂಸ್ಥೆ, ಎ. 7: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷರೊಂದಿಗೆ ಪಾಕಿಸ್ತಾನ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದೆ. ಕಾಶ್ಮೀರ ಕಣಿವೆಯಲ್ಲಿನ ಪರಿಸ್ಥಿತಿ ಹಾಗೂ ನಿಯಂತ್ರಣ ರೇಖೆಯಲ್ಲಿ ಹೆಚ್ಚಿರುವ ಉದ್ವಿಗ್ನತೆ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯಾಗಿದೆ ಎಂದು ಅದು ಹೇಳಿದೆ.

ಎಪ್ರಿಲ್ ತಿಂಗಳ ಅವಧಿಗೆ ಭದ್ರತಾ ಮಂಡಳಿಯ ಅಧ್ಯಕ್ಷರಾಗಿರುವ ಗುಸ್ತಾವೊ ಮೆಝ-ಕ್ವಾಡ ಜೊತೆಗೆ ತಾನು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದೆ ಎಂದು ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಮಲಿಹಾ ಲೋಧಿ ಶುಕ್ರವಾರ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಗುಸ್ತಾವೊ ಮೆಝ-ಕ್ವಾಡ ವಿಶ್ವಸಂಸ್ಥೆಗೆ ಪೆರು ದೇಶದ ಖಾಯಂ ಪ್ರತಿನಿಧಿಯಾಗಿದ್ದಾರೆ.

‘ಕಾಶ್ಮೀರ ಏಕತಾ ದಿನ’ದ ಭಾಗವಾಗಿ ಶುಕ್ರವಾರ ಏರ್ಪಡಿಸಲಾದ ಸಭೆಯಲ್ಲಿ, ವಿಶ್ವಸಂಸ್ಥೆಯ ಪಾಕಿಸ್ತಾನಿ ಕಚೇರಿಯಲ್ಲಿ ಪಾಕಿಸ್ತಾನ ಮತ್ತು ಕಾಶ್ಮೀರಿ ಸಮುದಾಯದ ಸದಸ್ಯರೊಂದಿಗೆ ಕಾಶ್ಮೀರ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಯಿತು ಎಂದು ಅವರು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News