ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ಆರನೇ ಚಿನ್ನ

Update: 2018-04-08 18:24 GMT
ಪೂನಂ ಯಾದವ್ - ಮನು ಭಾಕರ್

ಹೊಸದಿಲ್ಲಿ, ಎ. 8: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ನಾಲ್ಕನೇ ದಿನವಾದ ಇಂದು ಕೂಡಾ ಭಾರತ ಚಿನ್ನದ ಬೇಟೆ ಮುಂದುವರಿಸಿದೆ.

ಭಾರತ ಮತ್ತೆರಡು ಚಿನ್ನದ ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಆರು ಚಿನ್ನದ ಪದಕ ಗೆದ್ದುಕೊಂಡಂತಾಗಿದೆ. ಭಾರತದ ಪೂನಂ ಯಾದವ್ ಮತ್ತು ಮನು ಭಾಕರ್ ದೇಶಕ್ಕೆ ಚಿನ್ನ ಗೆದ್ದುಕೊಟ್ಟಿದ್ದಾರೆ. ಭಾರತದ ಶೂಟರ್ ಹೀನಾ ಸಿಧು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಈ ಮಧ್ಯೆ ಭಾರತದ ಶಟ್ಲರ್‌ಗಳು ಮತ್ತು ಬಾಕ್ಸರ್‌ಗಳು ತಮ್ಮ ಅಭಿಯಾನ ಮುಂದುವರಿಸಿದ್ದಾರೆ. ಆದರೆ ಭಾರತ ಹಾಕಿ ತಂಡ ಮಾತ್ರ ಪಾಕಿಸ್ತಾನದ ಜತೆ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.

ಮಹಿಳೆಯರ 10 ಮೀಟರ್ ಏರ್‌ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ ಚಿನ್ನಕ್ಕೆ ಗುರಿ ಇಟ್ಟರು. ಅವರು ಕೂಡ ದಾಖಲೆ ಸ್ಥಾಪಿಸಿದರೆ, ಭಾರತದವರೇ ಆದ ಹೀನಾ ಸಿಧು ಬೆಳ್ಳಿಗೆ ಕೊರಳೊಡ್ಡಿದರು.

ಸಿಧುಗೆ ಚಿನ್ನ ನಿರಾಕರಿಸಿದ ಮನು

ಮನು ತಮ್ಮ ದೇಶದ ಶೂಟರ್ ಹೀನಾ ಸಿಧು ಅವರನ್ನು ಹಿಂದಿಕ್ಕಿ ಚಿನ್ನ ಪಡೆದರು. ಸಿಧು 234 ಸ್ಕೋರ್ ದಾಖಲಿಸಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

 ಮನು ಭಕೆರ್ ಅವರು ಐಎಸ್‌ಎಸ್‌ಎಫ್ ವರ್ಲ್ಡ್ ಕಪ್‌ನಲ್ಲಿ ಎರಡು ಚಿನ್ನ ಪಡೆದಿದ್ದರು.388 ಸ್ಕೋರ್ ದಾಖಲಿಸಿ ಕಾಮನ್‌ವೆಲ್ತ್ ಗೇಮ್ಸ್‌ಗೆ ತೇರ್ಗಡೆಯಾಗಿದ್ದರು.

ಭಕೆರ್ ಇದೀಗ 2020ರ ಟೋಕಿಯೋ ಗೇಮ್ಸ್‌ಗೆ ತಯಾರಿ ನಡೆಸುತ್ತಿದ್ದಾರೆ.

ಹೀನಾ ಸಿಧು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೂರನೇ ಬಾರಿ ಸ್ಪರ್ಧಾಕಣಕ್ಕಿಳಿದಿದ್ದಾರೆ

 ಹೊಸದಿಲ್ಲಿಯಲ್ಲಿ 2010ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಚಿನ್ನ ಜಯಿಸಲು ಭಾರತ ತಂಡಕ್ಕೆ ನೆರವಾಗಿದ್ದರು. ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದಿದ್ದರು.

2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 10 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದರೂ, ಪದಕ ಗೆಲ್ಲುವಲ್ಲಿ ಎಡವಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News