ಕಾಮನ್‌ವೆಲ್ತ್ ಗೇಮ್ಸ್‌: ಬ್ಯಾಡ್ಮಿಂಟನ್ ಮಿಶ್ರ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನ

Update: 2018-04-09 12:10 GMT

 ಗೋಲ್ಡ್‌ಕೋಸ್ಟ್, ಎ.9:  ಕಾಮನ್‌ವೆಲ್ತ್ ಗೇಮ್ಸ್‌ನ ಬ್ಯಾಡ್ಮಿಂಟನ್ ಮಿಶ್ರ ತಂಡ ವಿಭಾಗದಲ್ಲಿ ಭಾರತ ಚಿನ್ನ ಜಯಿಸಿದೆ.

ಕ್ರೀಡಾಕೂಟದ ಐದನೇ ದಿನವಾಗಿರುವ ಸೋಮವಾರ ಫೈನಲ್‌ನಲ್ಲಿ ಮಲೇಷ್ಯಾವನ್ನು 3-1 ಅಂತರದಲ್ಲಿ ಮಣಿಸಿದ ಭಾರತ ಚಿನ್ನ ಪಡೆಯಿತು.

ಅಶ್ವಿನಿ ಪೊನ್ನಪ್ಪ , ಸಾತ್ವಿಕ್ ರಾಂಕಿರೆಡ್ಡಿ, ಕೆ.ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಅವರನ್ನೊಳಗೊಂಡ ತಂಡ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಚಿನ್ನ ತಂದು ಕೊಟ್ಟರು.  ಇದರೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನ ಮಿಶ್ರ ತಂಡ ವಿಭಾಗದಲ್ಲಿ ಭಾರತ ಮೊದಲ ಚಿನ್ನ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News