ಐಪಿಎಲ್ 2018: ಹೈದರಾಬಾದ್ ಗೆ 9 ವಿಕೆಟ್ ಗೆಲುವು

Update: 2018-04-09 17:46 GMT

 ಹೈದರಾಬಾದ್, ಎ.9: ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಸೋಮವಾರ ನಡೆದ 4ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡ 9 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು.

ಗೆಲ್ಲಲು 126 ರನ್ ಗುರಿ ಪಡೆದಿದ್ದ ಹೈದರಾಬಾದ್ ತಂಡ ಆರಂಭಿಕ ಆಟಗಾರ ಶಿಖರ್ ಧವನ್ (ಔಟಾಗದೆ 77,57 ಎಸೆತ, 13 ಬೌಂಡರಿ, 1 ಸಿಕ್ಸರ್) ಹಾಗೂ ಹಾಗೂ ನಾಯಕ ವಿಲಿಯಮ್ಸನ್(ಅಜೇಯ 36)2ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಸೇರಿಸಿದ 121 ರನ್ ನೆರವಿನಿಂದ 15.5 ಓವರ್‌ಗಳಲ್ಲಿ 127 ರನ್ ಗಳಿಸಿತು.

ಗೆಲ್ಲಲು ಸುಲಭ ಸವಾಲು ಪಡೆದ ಹೈದರಾಬಾದ್ ತಂಡ ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಆರಂಭಿಕ ಆಟಗಾರ ಸಹಾ(5) ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆಯಿತು.

 ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 125 ರನ್ ಗಳಿಸಿತು. ರಾಜಸಾನದ ಪರ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್(49,42 ಎಸೆತ, 5 ಬೌಂಡರಿ) ಏಕಾಂಗಿ ಹೋರಾಟ ನೀಡಿದರು. ನಾಯಕ ಅಜಿಂಕ್ಯ ರಹಾನೆಯೊಂದಿಗೆ 2ನೇ ವಿಕೆಟ್‌ಗೆ 46 ರನ್ ಜೊತೆಯಾಟ ನಡೆಸಿದರು.

ಹೈದರಾಬಾದ್ ಪರ ಶಾಕಿಬ್ ಅಲ್ ಹಸನ್(2-23)ಸಿದ್ದಾರ್ಥ್ ಕೌಲ್(2-14) ತಲಾ ಎರಡು ವಿಕೆಟ್ ಹಾಗೂ ರಶೀದ್ ಖಾನ್(1-23), ಭುವನೇಶ್ವರ ಕುಮಾರ್(1-30) ಹಾಗೂ ಸ್ಟಾನ್‌ಲೇಕ್(1-29) ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News